ಕುಂದುತ್ತಿರುವ 'ಕೈ' ಬಲ: ಬಿಜೆಪಿಗೆ ಪರ್ಯಾಯವಾಗಿ ಪ್ರಬಲ ಪ್ರತಿಪಕ್ಷವಾಗಿ ಮೆರೆಯಲು ಟಿಎಂಸಿ, ಎನ್ ಸಿಪಿ ಯತ್ನ

ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ವಿರೋಧ ಪಕ್ಷವನ್ನು ಕಟ್ಟುವ ಕೆಲಸ ನಡೆಯುತ್ತಿರುವಾಗ ಕಾಂಗ್ರೆಸ್ ನ್ನು ಮೀರಿ ಸ್ಥಳೀಯ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಪ್ರಬಲ ವಿರೋಧ ಪಕ್ಷಗಳಾಗಿ ನಿಲ್ಲಲು ಪ್ರಯತ್ನಿಸುತ್ತಿವೆ.
ದೆಹಲಿಯ ಸಂಸತ್ತು ಭವನದಲ್ಲಿ ನಡೆದ ಸಭೆಯ ನಂತರ ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ
ದೆಹಲಿಯ ಸಂಸತ್ತು ಭವನದಲ್ಲಿ ನಡೆದ ಸಭೆಯ ನಂತರ ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ

ನವದೆಹಲಿ: ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ವಿರೋಧ ಪಕ್ಷವನ್ನು ಕಟ್ಟುವ ಕೆಲಸ ನಡೆಯುತ್ತಿರುವಾಗ ಕಾಂಗ್ರೆಸ್ ನ್ನು ಮೀರಿ ಸ್ಥಳೀಯ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಪ್ರಬಲ ವಿರೋಧ ಪಕ್ಷಗಳಾಗಿ ನಿಲ್ಲಲು ಪ್ರಯತ್ನಿಸುತ್ತಿವೆ.

ಸ್ಥಳೀಯ ಮಟ್ಟದಲ್ಲಿ ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಗಳಲ್ಲಿ ಸೋಲುತ್ತಾ ಬಂದಿದೆ. ಕೇವಲ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಇಂದು ಕಾಂಗ್ರೆಸ್ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ಕೂಡ ಬಿಜೆಪಿಗೆ ಪರ್ಯಾಯವಾಗಿ ಪ್ರಬಲ ವಿರೋಧ ಪಕ್ಷವಾಗಿ ಕಾಂಗ್ರೆಸ್ ಉಳಿದಿಲ್ಲ. ಇಂತಹ ಸಂದರ್ಭದಲ್ಲಿ ಸ್ಥಳೀಯ ಪಕ್ಷಗಳಾದ ಟಿಎಂಸಿ, ಎನ್ ಸಿಪಿ ಮತ್ತು ಇತರ ಕೆಲವು ಪಕ್ಷಗಳು ತಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು, ಬಲಾಢ್ಯಗೊಳಿಸಲು ಯತ್ನಿಸುತ್ತಿವೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ಸಿನಲ್ಲಿ ಉನ್ನತ ನಾಯಕರು ದುರ್ಬಲಗೊಳ್ಳುತ್ತಿರುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾಗುತ್ತಿರುವುದರಿಂದ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳತ್ತ ಇತ್ತೀಚೆಗೆ ಕಾರ್ಯಕರ್ತರು ಮುಖ ಮಾಡುವಂತೆ ಮಾಡುತ್ತಿದೆ. "ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ, ಅಸ್ಸಾಂ ಮತ್ತು ಕೇರಳದಲ್ಲಿ ಕಳಪೆ ಪ್ರದರ್ಶನ ತೋರಿರುವ ಕಾಂಗ್ರೆಸ್ ಈಗ ಮತ್ತಷ್ಟು ಕುಗ್ಗಿದೆ. ಕಳೆದ ವರ್ಷ ಬಿಹಾರ ಚುನಾವಣೆಯಲ್ಲಿ ಕೂಡ ಹೀಗೆಯೇ ಆಯಿತು.

ಪಶ್ಚಿಮ ಬಂಗಾಳದಲ್ಲಿ ಬಹುಪಾಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟಿಎಂಸಿ ಅಥವಾ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳು, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಇದೇ ರೀತಿಯಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಮರಳಿ ಪಡೆಯಲು ವಿಫಲವಾಗಿದೆ. ಇದು ಪಂಜಾಬ್, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಹಿಡಿತವನ್ನು ಉಳಿಸಿಕೊಳ್ಳಲು ಅಥವಾ ಪ್ರಮುಖ ವಿರೋಧವಾಗಿ ಹೊರಹೊಮ್ಮಲು ಹೆಣಗಾಡುತ್ತಿದೆ.

ಸಮಾನ ಮನಸ್ಕ ಪಕ್ಷಗಳು ಬಿಜೆಪಿಯನ್ನು ಎದುರಿಸಲು ಮೈತ್ರಿ ಮಾಡಿಕೊಳ್ಳಲು ಬಯಸುತ್ತಿರುವಾಗ, ಕಾಂಗ್ರೆಸ್‌ ನಾಯಕನ ಮನಸ್ಸನ್ನು ನೋಯಿಸಿಯಾದರೂ ಸ್ಥಳೀಯ ಮಟ್ಟದಲ್ಲಿ ಪ್ರಾಬಲ್ಯ ಮೆರೆದು ನಂತರ ರಾಷ್ಟ್ರಮಟ್ಟದಲ್ಲಿ ಮಿಂಚಲು ನೋಡುತ್ತಿವೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಟಿಎಂಸಿ ಬಂಗಾಳದಲ್ಲಿ ಎಡ ಮತ್ತು ಕಾಂಗ್ರೆಸ್ ಮೈತ್ರಿ ವಿರುದ್ಧ ಹೋರಾಡಿದೆ, ಕೇರಳದಲ್ಲಿ ಎಡ ಮತ್ತು ಕಾಂಗ್ರೆಸ್ ಪರಸ್ಪರ ವಿರುದ್ಧವಾಗಿತ್ತು. ಮಹಾರಾಷ್ಟ್ರದಲ್ಲಿ, ಎಲ್ಲಾ ಪ್ರಸ್ತುತ ಮೈತ್ರಿ ಪಾಲುದಾರರಾದ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪ್ರತ್ಯೇಕ ಘಟಕಗಳಾಗಿ ಸ್ಪರ್ಧಿಸಿವೆ, ಗುಜರಾತ್ ನಲ್ಲಿ ಸಹ ಇದೇ ಪರಿಸ್ಥಿತಿಯಿದೆ. ಇಂತಹ ಉದಾಹರಣೆಗಳು ಹಲವಾರು ಇತರ ರಾಜ್ಯಗಳಲ್ಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com