ಸುಲಿಗೆ ಪ್ರಕರಣದಲ್ಲಿ ಕ್ಲೀನ್ ಚಿಟ್ ದೊರೆತರೂ ಅನಿಲ್ ದೇಶ್ ಮುಖ್ ವಿರುದ್ಧ ಸಿಬಿಐ ಎಫ್ಐಆರ್

ಸುಲಿಗೆ ಪ್ರಕರಣದ ಆರೋಪ ಎದುರಿಸುತ್ತಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಅನಿಲ್ ದೇಶ್ ಮುಖ್
ಅನಿಲ್ ದೇಶ್ ಮುಖ್

ಸುಲಿಗೆ ಪ್ರಕರಣದ ಆರೋಪ ಎದುರಿಸುತ್ತಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.

ಈ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಅಧಿಕಾರಿಯೊಬ್ಬರು ಈ ಹಿಂದೆ ಅನಿಲ್ ದೇಶ್ ಮುಖ್ ಗೆ ಕ್ಲೀನ್ ಚಿಟ್ ನೀಡಿದ್ದರಾದರೂ ಈಗ ಹೊಸ ಎಫ್ಐಆರ್ ದಾಖಲಾಗಿದೆ.

ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಹಾಗೂ ಮುಂಬೈ ನ ಈ ಹಿಂದಿನ ಆಯುಕ್ತರಾಗಿದ್ದ ಪರಮ್ ಬಿರ್ ಸಿಂಗ್ ಅವರು, ಮುಂಬೈ ನಲ್ಲಿರುವ ಬಾರ್ ಗಳಿಂದ ಪ್ರತಿ ತಿಂಗಳು 100 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವಂತೆ (ವಸೂಲಿ ಮಾಡುವಂತೆ) ಅನಿಲ್ ದೇಶ್ ಮುಖ್ ನಿರ್ದೇಶನ ನೀಡಿದ್ದರು ಎಂದು ಪರಮ್ ಬಿರ್ ಸಿಂಗ್ ಗಂಭೀರ ಆರೋಪ ಮಾಡಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಿಬಿಐ ನ ಕಾರ್ಯನಿರ್ವಹಣೆಯನ್ನು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಪ್ರಶ್ನಿಸಿ ಅನಿಲ್ ದೇಶ್ ಮುಖ್ ವಿರುದ್ಧದ ಆರೋಪ ಹಾಗೂ ಕ್ರಿಯೆಗಳು ರಾಜಕೀಯ ಪ್ರತೀಕಾರದ್ದಾಗಿದೆ ಎಂದು ಹೇಳಿತ್ತು.

"ಸುಲಿಗೆ ಆರೋಪದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ತನಿಖೆಯ ವರದಿ ಸಲ್ಲಿಕೆಯೂ ಆಗಿದೆ.

ಸಿಬಿಐ ಅಧಿಕಾರಿ ತಮ್ಮ ವರದಿಯಲ್ಲಿ ಅನಿಲ್ ದೇಶ್ ಮುಖ್ ವಿರುದ್ಧ ಯಾವುದೇ ಸಾಕ್ಷ್ಯಗಳೂ ಇಲ್ಲ ಎಂದು ತಿಳಿಸಿದ್ದರು. ಆದರೆ ಸಿಬಿಐ ನ ಹಿರಿಯ ಅಧಿಕಾರಿಗಳು ರಾಜಕೀಯ ಒತ್ತಡದ ಕಾರಣದಿಂದ ದೇಶ್ ಮುಖ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದು ರಾಜಕೀಯ ದ್ವೇಷದಿಂದ ನಡೆಯುತ್ತಿರುವ ಪ್ರಕರಣವಾಗಿದ್ದು, ಹೈಕೋರ್ಟ್ ಮಧ್ಯಪ್ರವೇಶಿಸಿ ಪ್ರಕರಣವನ್ನು ರದ್ದುಗೊಳಿಸಬೇಕು" ಎಂದು ಎನ್ ಸಿ ಪಿ ವಕ್ತಾರ ನವಾಬ್ ಮಲಿಕ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com