ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ
ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ

ಭಾರತೀಯ ಸೇನೆಯಿಂದ ಕಾಶ್ಮೀರದ ಯುವ ಪ್ರತಿಭೆಗಳಿಗಾಗಿ ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ ಆಯೋಜನೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗುವುದನ್ನು ತಪ್ಪಿಸುವ ಸಲುವಾಗಿ ಕಾಶ್ಮೀರದ ಯುವ ಪ್ರತಿಭೆಗಳಿಗಾಗಿ ಭಾರತೀಯ ಸೇನೆ ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ ಆಯೋಜಿಸಿದೆ. 

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗುವುದನ್ನು ತಪ್ಪಿಸುವ ಸಲುವಾಗಿ ಕಾಶ್ಮೀರದ ಯುವ ಪ್ರತಿಭೆಗಳಿಗಾಗಿ ಭಾರತೀಯ ಸೇನೆ ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ ಆಯೋಜಿಸಿದೆ. 

ಹೌದು.. ಭಾರತೀಯ ಸೇನೆಯು ಕಾಶ್ಮೀರದ ಯುವಕರನ್ನು ಕ್ರೀಡಾ ಚಟುವಟಿಕೆಗಳತ್ತ ಪ್ರೇರೇಪಿಸಲು ಜಶ್ನ್-ಇ-ಜನೂಬ್ ಎಂಬ ಕ್ರೀಡಾ ಉತ್ಸವವನ್ನು ಆಯೋಜಿಸಿದ್ದು, 15 ದಿನಗಳ ಈ ಸುದೀರ್ಘ ಕಾರ್ಯಕ್ರಮ ಮಂಗಳವಾರ ಮುಕ್ತಾಯಗೊಂಡಿತು. ಉತ್ಸವದಲ್ಲಿ ಹಲವಾರು ಯುವಕರು ಭಾಗವಹಿಸಿದ್ದರು. ಕಬಡ್ಡಿ, ಓಟ ಮತ್ತು ಸ್ಕೈ ಡೈವಿಂಗ್, ಮಾರ್ಷಲ್ ಆರ್ಟ್ಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಪ್ರದರ್ಶಿಸಲಾಯಿತು. 

ಈ ಬಗ್ಗೆ ಮಾತನಾಡಿದ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದ ಮಾರ್ಷಲ್ ಆರ್ಟ್ಸ್ ಕಲಾವಿದ ಹನೀಸ್ ಶಬ್ಬೀರ್ ಎಂಬುವವರು, 'ಈ ರೀತಿಯ ಕೂಟಗಳು ಕಾಶ್ಮೀರದ ಜನರಿಗೆ ಒಳ್ಳೆಯದು. ಏಕೆಂದರೆ ಅವರು ಜೀವನದಲ್ಲಿ ಏನನ್ನಾದರೂ ಮಾಡಲು ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ. ಮನಸ್ಸಿನಲ್ಲಿರುವ ಎಲ್ಲಾ ಅಪಾಯಕಾರಿ ಸಂಗತಿಗಳಿಂದ ದೂರವಿರಲು ಕ್ರೀಡೆ ಉತ್ತಮ ಮಾರ್ಗವಾಗಿದೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಪ್ರಾಮುಖ್ಯತೆ ನೀಡಬೇಕು. ಎಲ್ಲಾ ಪೋಷಕರನ್ನು ತಮ್ಮ ಮಕ್ಕಳನ್ನು ಕಳುಹಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ಮತ್ತೋರ್ವ ಸ್ಪರ್ಧಿ ಕ್ರೀಡೋತ್ಸವ ಆಯೋಜಿಸಿದ ಕಾಶ್ಮೀರ ಸರ್ಕಾರವನ್ನು ಶ್ಲಾಘಿಸಿದರು. ಈ ಕ್ರೀಡಾಕೂಟದಲ್ಲಿ ಪ್ರಸ್ತುತಪಡಿಸಿದ ಕ್ರೀಡಾಪಟುಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ತುಂಬಾ ಬೆಂಬಲವಿದೆ ಎಂದು ಹೇಳಿದರು. 

ಉತ್ಸವದ ಸಮಯದಲ್ಲಿ ಜಿಒಸಿ ಚಿನಾರ್ ಕಾರ್ಪ್ಸ್ ಮತ್ತು ಐಜಿಪಿ ಕಾಶ್ಮೀರ  ಅವರ ನೇತೃತ್ವದಲ್ಲಿ ಶೋಪಿಯಾನ್‌ ಕ್ರೀಡಾಂಗಣದಲ್ಲಿ 111 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಸ್ಥಾಪಿಸಲಾಗಿತ್ತು.

ಸಮಾರಂಭದಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಅವರು, ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ (15 ಕಾರ್ಪ್ಸ್) ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಕ್ರೀಡಾಕೂಟ ಪಾಲ್ಗೊಂಡವರನ್ನು ಅಭಿನಂದಿಸಿದರು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಇಲ್ಲಿನ ಜನರನ್ನು ನಾನು ಅಭಿನಂದಿಸುತ್ತೇನೆ. ಅಲ್ಲದೆ ಇಡೀ ಕೂಟವನ್ನು ಯಾವುದೇ ಅಡೆತಡೆ ಇಲ್ಲದೆ ಅಚ್ಚುಕಟ್ಟಾಗಿ ಆಯೋಜಿಸಿದ ಸ್ಥಳೀಯ ನಾಗರಿಕ ಆಡಳಿತಗಳನ್ನು ಅಭಿನಂದಿಸುತ್ತೇನೆ.  ಸುಮಾರು 1000 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು ಎಂಬುದು ವಿಶೇಷ. ಮುಂದಿನ ಕೂಟದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ವಿಶ್ವಾಸವಿದೆ ಎಂದು ಹೇಳಿದರು. 

ಅಲ್ಲದೆ ದಕ್ಷಿಣ ಕಾಶ್ಮೀರದಲ್ಲಿ ಮುಂದಿನ ಒಲಿಂಪಿಯನ್ ಇರಬಹುದೆಂದು.  ಮುಂದಿನ ಪರ್ವೇಜ್ ರಸೂಲ್, ಪಿವಿ ಸಿಂಧು, ಚಾನು ಸೈಖೋಮ್ ಮೀರಾಬಾಯಿ, ಮತ್ತು ನೀರಜ್ ಚೋಪ್ರಾರಂತೆ ಮುಂದಿನ ಚಿನ್ನದ ಪದಕ ಗೆಲ್ಲುವವರು ಇಲ್ಲಿಂದಲೇ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Stories

No stories found.

Advertisement

X
Kannada Prabha
www.kannadaprabha.com