ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇರಳದ ಅಗತ್ಯಗಳನ್ನು ಕೇಂದ್ರ ನಿರ್ಲಕ್ಷಿಸುತ್ತಿದೆ: ಸಿಎಂ ಪಿಣರಾಯಿ ವಿಜಯನ್
ಕೇಂದ್ರ ಸರ್ಕಾರವು ತನ್ನ ನಿಲುವನ್ನು ಬದಲಿಸಿದೆ ಮತ್ತು ಸಿಲ್ವರ್‌ಲೈನ್‌ನಂತಹ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಅಗತ್ಯಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್...
Published: 01st December 2021 12:37 AM | Last Updated: 01st December 2021 12:37 AM | A+A A-

ಪಿಣರಾಯಿ ವಿಜಯನ್ (ಸಂಗ್ರಹ ಚಿತ್ರ)
ತಿರುವನಂತಪುರಂ: ಕೇಂದ್ರ ಸರ್ಕಾರವು ತನ್ನ ನಿಲುವನ್ನು ಬದಲಿಸಿದೆ ಮತ್ತು ಸಿಲ್ವರ್‌ಲೈನ್‌ನಂತಹ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಅಗತ್ಯಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಆರೋಪಿಸಿದ್ದಾರೆ.
ರಾಜ್ಯದ ಅಗತ್ಯಗಳನ್ನು ನಿರ್ಲಕ್ಷಿಸುವ ಕೇಂದ್ರದ ನಿಲುವಿನ ವಿರುದ್ಧದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯನ್ ಅವರು, ಕೇರಳದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸುಧಾರಣೆಯು ಯುಡಿಎಫ್ ನೇತೃತ್ವದ ಪ್ರತಿಪಕ್ಷ ಮತ್ತು ಬಿಜೆಪಿ ಕಂಟಕವಾಗಿದೆ ಎಂದು ಹೇಳಿದರು.
ಇದನ್ನು ಓದಿ: 744 ಕೇರಳ ಪೊಲೀಸರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು: ಪಿಣರಾಯಿ ವಿಜಯನ್ ಬಹಿರಂಗ
ಕೇಂದ್ರವು ಆರಂಭದಲ್ಲಿ ಬೆಂಬಲಿಸಿದ ಸಿಲ್ವರ್‌ಲೈನ್‌ನಂತಹ ಯೋಜನೆಗಳನ್ನು ಈಗ ನಿರ್ಲಕ್ಷಿಸಲಾಗುತ್ತಿದೆ. ಬಹುಶಃ ಇದಕ್ಕೆ ಕೇರಳ ಬಿಜೆಪಿ ವಿರೋಧ ಕಾರಣವಾಗಿರಬಹುದು ಎಂದರು.
ಸಿಲ್ವರ್‌ಲೈನ್, ತಿರುವನಂತಪುರವನ್ನು ಕಾಸರಗೋಡಿನೊಂದಿಗೆ ಸಂಪರ್ಕಿಸುವ ಸೆಮಿ-ಹೈಸ್ಪೀಡ್ ರೈಲು ಮಾರ್ಗವು ರಾಜ್ಯದ ಎರಡು ತುದಿಗಳ ನಡುವಿನ ಪ್ರಯಾಣದ ಸಮಯವನ್ನು ನಾಲ್ಕು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ಯಾವುದೇ ವನ್ಯಜೀವಿ ಪ್ರದೇಶಗಳ ಮೂಲಕ ಹಾದು ಹೋಗುವುದಿಲ್ಲ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ರಸ್ತೆಯ ಬದಲು ರೈಲಿನ ಮೂಲಕ ಸರಕುಗಳನ್ನು ಸಹ ಸಾಗಿಸಬಹುದು ಎಂದು ಕೇರಳ ಮುಖ್ಯಮಂತ್ರಿ ಹೇಳಿದ್ದಾರೆ.