ತಜ್ಞರ ಸಲಹೆ ಮೇರೆಗೆ ಬೂಸ್ಟರ್ ಡೋಸ್, ಮಕ್ಕಳಿಗೆ ಲಸಿಕೆ ಬಗ್ಗೆ ನಿರ್ಧಾರ: ಕೇಂದ್ರ ಆರೋಗ್ಯ ಸಚಿವ
ತಜ್ಞರ ವೈಜ್ಞಾನಿಕ ಮಾರ್ಗದರ್ಶನದ ಆಧಾರದ ಮೇಲೆ ಬೂಸ್ಟರ್ ಡೋಸ್ ಮತ್ತು ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಶುಕ್ರವಾರ...
Published: 03rd December 2021 08:17 PM | Last Updated: 03rd December 2021 08:17 PM | A+A A-

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ
ನವದೆಹಲಿ: ತಜ್ಞರ ವೈಜ್ಞಾನಿಕ ಮಾರ್ಗದರ್ಶನದ ಆಧಾರದ ಮೇಲೆ ಬೂಸ್ಟರ್ ಡೋಸ್ ಮತ್ತು ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತು ನಡೆದ 11 ಗಂಟೆಗಳ ಸುದೀರ್ಘ ಚರ್ಚೆಯ ವೇಳೆ ಮಾತನಾಡಿದ ಮಾಂಡವಿಯಾ ಅವರು, ಭಾರತವು ಕೊರೋನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಕಣ್ಗಾವಲು ಹೆಚ್ಚಿಸಲಾಗಿದೆ ಎಂದರು.
ಇದನ್ನು ಓದಿ: ಓಮಿಕ್ರಾನ್ ರೂಪಾಂತರಿ ವಿರುದ್ಧ ಹಾಲಿ ಲಸಿಕೆಗಳು ಕೆಲಸ ಮಾಡುತ್ತವೆ: ಕೇಂದ್ರ ಸರ್ಕಾರ
"ಅಪಾಯದಲ್ಲಿರುವ" ದೇಶಗಳಿಂದ ಬಂದ 16,000 ಪ್ರಯಾಣಿಕರಿಗೆ RT-PCR ಪರೀಕ್ಷೆಗಳನ್ನು ನಡೆಸಲಾಗಿದೆ. ಅವರಲ್ಲಿ 18 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ 18 ಪ್ರಯಾಣಿಕರ ಸ್ವ್ಯಾಬ್ ಮಾದರಿಗಳನ್ನು ಓಮಿಕ್ರಾನ್ ರೂಪಾಂತರಿ ಪರೀಕ್ಷಿಸಲು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದರು.
ವೈಜ್ಞಾನಿಕ ಸಲಹೆಗಳ ಆಧಾರದ ಮೇಲೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಮತ್ತು ಬೂಸ್ಟರ್ ಡೋಸ್ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಜ್ಞಾನಿಗಳಲ್ಲಿ ನಂಬಿಕೆ ಇಡುವಂತೆ ಪ್ರತಿಪಕ್ಷಗಳಲ್ಲಿ ಅವರು ಮಾಂಡವಿಯಾ ಅವರು ಮನವಿ ಮಾಡಿದರು.