ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಓಮಿಕ್ರಾನ್ ರೂಪಾಂತರ ಪತ್ತೆ

ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಕೋವಿಡ್-19 ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪತ್ತೆಯಾಗಿದೆ. ಶ್ರೀಲಂಕಾದಲ್ಲಿ ಶುಕ್ರವಾರ ಓಮಿಕ್ರಾನ್ ರೂಪಾಂತರಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸೇವೆಗಳ ಉಪ ಮಹಾನಿರ್ದೇಶಕ ಹೇಮಂತ ಹೆರತ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬೊ: ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಕೋವಿಡ್-19 ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪತ್ತೆಯಾಗಿದೆ. ಶ್ರೀಲಂಕಾದಲ್ಲಿ ಶುಕ್ರವಾರ ಓಮಿಕ್ರಾನ್ ರೂಪಾಂತರಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸೇವೆಗಳ ಉಪ ಮಹಾನಿರ್ದೇಶಕ ಹೇಮಂತ ಹೆರತ್ ಹೇಳಿದ್ದಾರೆ.

ನಮ್ಮ ಲ್ಯಾಬ್ ನಿಂದ ವ್ಯಕ್ತಿಯೊಬ್ಬರಿಂದ ಓಮಿಕ್ರಾನ್ ಸೋಂಕು ಇಂದು ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಆ ವ್ಯಕ್ತಿ ಸದ್ಯ ತಮ್ಮ ಕುಟುಂಬ ಸದಸ್ಯರೊಂದಿಗೆ ಕ್ವಾರಂಟೈನ್ ನಲ್ಲಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. 

ದಕ್ಷಿಣ ಆಫ್ರಿಕಾ, ಬೊಟ್ಸಾವಾನ, ಜಿಂಬಾಬ್ವೆ, ನಮಿಬಿಯಾ, ಲೆಸೊತೊ ಮತ್ತಿತರ ರಾಷ್ಟ್ರಗಳಿಂದ ಆಗಮಿಸುವ  ಪ್ರವಾಸಿಗರಿಗೆ ಕಡ್ಡಾಯವಾಗಿ ಕ್ವಾರಂಟೈನ್ ನ್ನು ಶ್ರಿಲಂಕಾ ಸರ್ಕಾರ ನವೆಂಬರ್ 28 ರಂದು ಘೋಷಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com