ಕಳೆದ ಕೆಲವು ವಾರಗಳಲ್ಲಿ ಭಾರತ ಹಲವಾರು ದೇಶಗಳಿಗೆ ಕೋವಿಡ್ ಲಸಿಕೆ ಪೂರೈಸಿದೆ: ಕೇಂದ್ರ

ದೇಶೀಯ ಬೇಡಿಕೆಯನ್ನು ಪೂರೈಸಲು ಕೋವಿಡ್ ಲಸಿಕೆ ರಫ್ತು ಸ್ಥಗಿತಗೊಳಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಲಸಿಕೆ ರಫ್ತು ಆರಂಭಿಸಿದೆ. ಭಾರತ ಕಳೆದ ಕೆಲವು ವಾರಗಳಲ್ಲಿ ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಇರಾನ್, ಪರಾಗ್ವೆ ಮತ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶೀಯ ಬೇಡಿಕೆಯನ್ನು ಪೂರೈಸಲು ಕೋವಿಡ್ ಲಸಿಕೆ ರಫ್ತು ಸ್ಥಗಿತಗೊಳಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಲಸಿಕೆ ರಫ್ತು ಆರಂಭಿಸಿದೆ. ಭಾರತ ಕಳೆದ ಕೆಲವು ವಾರಗಳಲ್ಲಿ ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಇರಾನ್, ಪರಾಗ್ವೆ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಿಗೆ ಕೋವಿಡ್ ಲಸಿಕೆ ಪೂರೈಸಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.

ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಅವರು, ಜನವರಿಯಲ್ಲಿ ಲಸಿಕೆ ಮೈತ್ರಿ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಭಾರತ ಒಟ್ಟು 94 ದೇಶಗಳಿಗೆ ಮತ್ತು ಎರಡು ವಿಶ್ವಸಂಸ್ಥೆ ಘಟಕಗಳಿಗೆ 723.435 ಲಕ್ಷ ಡೋಸ್‌ಗಳನ್ನು ಅನುದಾನ, ವಾಣಿಜ್ಯ ರಫ್ತು ಅಥವಾ ಕೋವ್ಯಾಕ್ಸ್ ಮೂಲಕ ಪೂರೈಸಿದೆ ಎಂದು ಹೇಳಿದರು.

"ದೇಶೀಯ ಬೇಡಿಕೆಯನ್ನು ಪೂರೈಸಲು ಮಾಡಿದ್ದ ಲಸಿಕೆ ರಫ್ತು ನಿಷೇಧ ತೆರವುಗೊಳಿಸಿದ ನಂತರ, ಕಳೆದ ಕೆಲವು ವಾರಗಳಲ್ಲಿ ಭಾರತವು ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಇರಾನ್, ಪರಾಗ್ವೆ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಿಗೆ ಲಸಿಕೆ ಪೂರೈಸಿದೆ" ಎಂದು ಮುರಳೀಧರನ್ ಮಾಹಿತಿ ನೀಡಿದರು.

ಲಸಿಕೆಗಳ ರಫ್ತಿನ ನಿಖರವಾದ ಪ್ರಮಾಣವನ್ನು ದೇಶೀಯ ಉತ್ಪಾದನೆ ಮತ್ತು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಅವಶ್ಯಕತೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com