ಚುನಾವಣೆ ಹೊಸ್ತಿಲಲ್ಲಿರುವ ಉತ್ತರಾಖಂಡ್ ರಾಜ್ಯಕ್ಕೆ 18 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಘೋಷಿಸಿದ ಪ್ರಧಾನಿ ಮೋದಿ

ಚುನಾವಣೆ ಹೊಸ್ತಿಲಲ್ಲಿರುವ ಉತ್ತರಾಖಂಡ್ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ 18,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಶನಿವಾರ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಡೆಹ್ರಾಡೂನ್: ಚುನಾವಣೆ ಹೊಸ್ತಿಲಲ್ಲಿರುವ ಉತ್ತರಾಖಂಡ್ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ 18,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಶನಿವಾರ ಘೋಷಿಸಿದ್ದಾರೆ. ಪರೇಡ್ ಮೈದಾನದಲ್ಲಿ ಇಂದು ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ರೀತಿಯ ಘೋಷಣೆ ಮಾಡಿದರು. 

2,573 ಕೋಟಿ ಮೊತ್ತದ ಏಳು ಯೋಜನೆಗಳನ್ನು ಉದ್ಘಾಟಿಸಿದ ಮೋದಿ, 15, 728 ಕೋಟಿ ಮೊತ್ತದ 11 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ದೆಹಲಿ-ಡೆಹ್ರಡೂನ್ ಎಕ್ಸ್ ಪ್ರೆಸ್ ವೇ ಅಥವಾ ಎಕಾನಮಿಕ್ ಕಾರಿಡಾರ್, ಬದ್ರಿನಾಥ ದೇವಾಲಯ ಅಭಿವೃದ್ಧಿ ಸೇರಿದಂತೆ  ಅನೇಕ ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆ ಪೂರ್ಣಗೊಂಡರೆ ಉಭಯ ನಗರಗಳ ನಡುವಿನ ದೂರವನ್ನು 248 ಕಿಲೋ ಮೀಟರ್ ನಿಂದ 180 ಕಿಲೋ ಮೀಟರ್ ಗೆ ಕಡಿಮೆ ಮಾಡಲಿದೆ. 

120 ಮೆಗಾ ವ್ಯಾಟ್ ಸಾಮರ್ಥ್ಯದ ವ್ಯಾಸಿ ಅಣು ವಿದ್ಯುತ್ ಯೋಜನೆ, ದೇವ ಪ್ರಯಾಗ್ ಮತ್ತು ಶ್ರೀಕೋಟ್ ನಡುವಿನ 38 ಕಿ. ಮೀ ಉದ್ದದ ಎನ್ ಹೆಚ್ -58, ಹೃಷಿಕೇಶಿ- ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ 33 ಕಿಲೋ ಮೀಟರ್ ವಿಸ್ತರಿತ ಮಾರ್ಗ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಈ ಯೋಜನೆಗಳು ಉತ್ತರಾಖಂಡ್ ದಶಕ ಮಾಡುವಲ್ಲಿ ನೆರವಾಗಲಿವೆ ಎಂದು ಮೋದಿ ರ‍್ಯಾಲಿಯಲ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com