ತ್ರಿಪುರ: ಸರ್ವಿಸ್ ರೈಫಲ್ ನಿಂದ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಯೋಧ, ಬಂಧನ
ತ್ರಿಪುರ ಸ್ಟೇಟ್ ರೈಫಲ್ಸ್ ನ ಯೋಧರೊಬ್ಬರು ಶನಿವಾರ ಸರ್ವಿಸ್ ರೈಫಲ್ ನಿಂದ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.
Published: 04th December 2021 06:37 PM | Last Updated: 04th December 2021 06:37 PM | A+A A-

ಸಾಂದರ್ಭಿಕ ಚಿತ್ರ
ಗುವಾಹಟಿ: ತ್ರಿಪುರ ಸ್ಟೇಟ್ ರೈಫಲ್ಸ್ ನ ಯೋಧರೊಬ್ಬರು ಶನಿವಾರ ಸರ್ವಿಸ್ ರೈಫಲ್ ನಿಂದ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಪಶ್ಚಿಮ ತ್ರಿಪುರಾದಲ್ಲಿ ಈ ಘಟನೆ ನಡೆದಿದ್ದು. ಯೋಧ ಸುಕಾಂತ ದಾಸ್(38) ಅವರು ಸುಬೇದಾರ್ ಮಾರ್ಕಾ ಸಿಂಗ್ ಜಮಾತಿಯಾ (47) ಮತ್ತು ನಾಯೆಬ್ ಸುಬೇದಾರ್ ಕಿರಣ್ ಜಮಾತಿಯಾ(37) ಅವರೊಂದಿಗೆ ಕೆಲವು ಕಾರಣಗಳಿಗಾಗಿ ಜಗಳವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ತ್ರಿಪುರಾ ಕೋಮುಗಲಭೆ ವರದಿ ಪ್ರಕರಣದಲ್ಲಿ ಇಬ್ಬರು ಮಹಿಳಾ ಪತ್ರಕರ್ತರ ಬಂಧನ, ಬಳಿಕ ಜಾಮೀನು
ಘರ್ಷಣೆಯ ಸಮಯದಲ್ಲಿ ದಾಸ್ ತನ್ನ ಸರ್ವಿಸ್ ರೈಫಲ್‌ನಿಂದ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಸುಬೇದಾರ್ ಮಾರ್ಕಾ ಸಿಂಗ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಜಮಾತಿಯಾ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ, ಗುಂಡಿನ ದಾಳಿ ನಡೆಸಿದ ಯೋಧನನ್ನು ನಿಶ್ಯಸ್ತ್ರಗೊಳಿಸಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇವರೆಲ್ಲರನ್ನು ಕೊನಬಾನ್‌ನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಡ್ರಿಲ್ಲಿಂಗ್ ಸ್ಥಳದಲ್ಲಿ ನಿಯೋಜಿಸಲಾಗಿತ್ತು.