ಜವಾದ್ ಚಂಡಮಾರುತ: ಒಡಿಶಾದಲ್ಲಿ ಭಾರಿ ಮಳೆ!

ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದ ಪರಿಣಾಮ ಸೃಷ್ಟಿಯಾಗಿರುವ ಜವಾದ್ ಚಂಡಮಾರುತದ ಪರಿಣಾಮವಾಗಿ ಭಾನುವಾರದಂದು ಒಡಿಶಾದಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. 
ಚಂಡಮಾರುತದ ಪರಿಣಾಮ ಒಡಿಶಾದಲ್ಲಿ ಭಾರಿ ಮಳೆ
ಚಂಡಮಾರುತದ ಪರಿಣಾಮ ಒಡಿಶಾದಲ್ಲಿ ಭಾರಿ ಮಳೆ
Updated on

ಭುವನೇಶ್ವರ್: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದ ಪರಿಣಾಮ ಸೃಷ್ಟಿಯಾಗಿರುವ ಜವಾದ್ ಚಂಡಮಾರುತದ ಪರಿಣಾಮವಾಗಿ ಭಾನುವಾರದಂದು ಒಡಿಶಾದಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. 

ಕಳೆದ 6 ಗಂಟೆಗಳಲ್ಲಿ ಚಂಡಮಾರುತ ಕಿ.ಮೀ ಪ್ರತಿ ಗಂಟೆಗೆ 20 ವೇಗದಲ್ಲಿ ಉತ್ತರ-ಈಶಾನ್ಯದತ್ತ ಚಲಿಸಿದೆ ಎಂದು ಹವಾಮಾನ ಇಲಾಖೆಯ ಕಚೇರಿ ಬೆಳಿಗ್ಗೆಯ ಬುಲೆಟಿನ್ ನಲ್ಲಿ ತಿಳಿಸಿತ್ತು.

ಮಧ್ಯಾಹ್ನದ ವೇಳೆಗೆ ಚಂಡಮಾರುತ ಮತ್ತಷ್ಟು ವಾಯುಭಾರ ಕುಸಿತದೊಂದಿಗೆ ಪುರಿ ಬಳಿ ಇರುವ ಒಡಿಶಾ ಕಡಲ ತೀರಕ್ಕೆ ತಲುಪಿದೆ.

ಮಧ್ಯರಾತ್ರಿ ವೇಳೆಗೆ ಒಡಿಶಾದ ಕಡಲ ತೀರ, ಪಶ್ಚಿಮಬಂಗಾಳ ಕಡಲ ತೀರದೆಡೆಗೆ ಮಧ್ಯರಾತ್ರಿ ವೇಳೆಗೆ ಚಂಡಮಾರುತ ತಲುಪಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.  

ರಾಜ್ಯದ ಗಂಜಾಮ್, ಖುರ್ದಾ,ಪುರಿ, ಕೇಂದ್ರಪಾರ ಹಾಗೂ ಜಗತ್ಸಿಂಗ್ ಪುರ್ ಗಳಲ್ಲಿ ಚಂಡಮಾರುತದ ಪರಿಣಾಮ ಭಾರಿ ಮಳೆಯಾಗುತ್ತಿದೆ. ಗಂಜಾಮ್ ನ ಖಾಲಿಕೋಟೆಯಲ್ಲಿ (158 ಎಂಎಂ ಮಳೆ) ನಯಾಗರ್ (107.5 ಎಂಎಂ) ಛತ್ರಪುರ (86.6 ಎಂಎಂ) ಹಾಗೂ ಭುವನೇಷ್ವರ್ (42.3 ಎಂಎಂ) ಮಳೆಯಾಗಿದ್ದು ಭಾನುವಾರ ಸಂಜೆ ವರೆಗೂ ಮಳೆ ಮುಂದುವರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com