ಸೈನಿಕರಿಂದ ನಾಗಾಲ್ಯಾಂಡ್ ನಾಗರೀಕರ ಹತ್ಯೆ: ಕೋರ್ಟ್ ಆಫ್ ಎನ್ ಕ್ವೈರಿ ಆದೇಶಿಸಿದ ಭಾರತೀಯ ಸೇನೆ!!
ನಾಗಾಲ್ಯಾಂಡ್ ನಲ್ಲಿ ನಡೆದ 14 ಮಂದಿ ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಕೋರ್ಟ್ ಆಫ್ ಎನ್ ಕ್ವೈರಿ (Court of Inquiry)ಗೆ ಆದೇಶ ನೀಡಿದೆ.
Published: 06th December 2021 03:57 PM | Last Updated: 06th December 2021 03:57 PM | A+A A-

ಉಗ್ರರೆಂದು ತಿಳಿದು ನಾಗರೀಕರ ಹತ್ಯೆ
ನವದೆಹಲಿ: ನಾಗಾಲ್ಯಾಂಡ್ ನಲ್ಲಿ ನಡೆದ 14 ಮಂದಿ ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಕೋರ್ಟ್ ಆಫ್ ಎನ್ ಕ್ವೈರಿ (Court of Inquiry)ಗೆ ಆದೇಶ ನೀಡಿದೆ.
ಇದನ್ನೂ ಓದಿ: ನಾಗಾಲ್ಯಾಂಡ್: ಭದ್ರತಾಪಡೆಗಳಿಂದ 13 ನಾಗರಿಕರ ಹತ್ಯೆ, ಹಾರ್ನ್ಬಿಲ್ ಹಬ್ಬ ರದ್ದುಗೊಳಿಸಿದ ಬುಡಕಟ್ಟು ಮಂದಿ
ಅದರಂತೆ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯ ಅಡಿಯಲ್ಲಿ ತನಿಖೆ ಮಾಡಲು ಭಾರತೀಯ ಸೇನೆಯು ನ್ಯಾಯಾಲಯದ ವಿಚಾರಣೆಯನ್ನು ಸ್ಥಾಪಿಸಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಇದನ್ನೂ ಓದಿ: 'ನಾಗಲ್ಯಾಂಡ್ ನಲ್ಲಿ ನಾಗರಿಕರ ಹತ್ಯೆ ದುರದೃಷ್ಟಕರ', ಹೊಣೆ ಹೊತ್ತುಕೊಂಡ ಸೇನೆ, ಉನ್ನತ ಮಟ್ಟದ ತನಿಖೆಗೆ ಆದೇಶ
ಈ ಬಗ್ಗೆ ಮಾತನಾಡಿರುವ ಸೇನಾಧಿಕಾರಿಯೊಬ್ಬರು, 'ನಾಗಾಲ್ಯಾಂಡ್ ನಾಗರಿಕ ಹತ್ಯೆಗಳನ್ನು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯ ಅಡಿಯಲ್ಲಿ ತನಿಖೆ ಮಾಡಲು ಭಾರತೀಯ ಸೇನೆಯು ನ್ಯಾಯಾಲಯದ ವಿಚಾರಣೆಯನ್ನು ಸ್ಥಾಪಿಸಿದೆ. ಅಧಿಕಾರಿಯನ್ನು ಈಶಾನ್ಯ ವಲಯದಲ್ಲಿ ಮಾತ್ರ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ನಾಗಾಲ್ಯಾಂಡ್ ನ ಸೋಮ ಜಿಲ್ಲೆಯಲ್ಲಿ ಎನ್‌ಎಸ್‌ಸಿಎನ್ (ಕೆವೈ) ಭಯೋತ್ಪಾದಕರ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಸೇನಾ ವಿಶೇಷ ಪಡೆಗಳ ಘಟಕವು ಗುಂಡಿನ ದಾಳಿಯಲ್ಲಿ ತೊಡಗಿದೆ.
ಇದನ್ನೂ ಓದಿ: AK-203 ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ, ಮಿಲಿಟರಿ ಸಹಕಾರಕ್ಕಾಗಿ 10 ವರ್ಷಗಳ ಒಪ್ಪಂದ ನವೀಕರಣ
ಉಗ್ರರೆಂದು ತಿಳಿದು ನಾಗರೀಕರ ಹತ್ಯೆ
ಇನ್ನು ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ಗ್ರಾಮಗಳಲ್ಲಿ 14 ನಾಗರಿಕರನ್ನು ಭದ್ರತಾ ಪಡೆಗಳ ಸಿಬ್ಬಂದಿ ಗುಂಡಿಟ್ಟು ಕೊಂದಿದ್ದಾರೆ. ದಾಳಿಯಲ್ಲಿ 11 ನಾಗರಿಕರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ಶನಿವಾರ ಸಂಜೆಯ ಹೊತ್ತು ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಟಿರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ನಾಗರಿಕರನ್ನು ಉಗ್ರರು ಎಂದು ತಪ್ಪಾಗಿ ಗುರುತಿಸಿ ಸೈನಿಕರು ನಡೆಸಿದ ದಾಳಿಯಲ್ಲಿ ಎಂಟುನಾಗರಿಕರು ಮೃತಪಟ್ಟಿದ್ದಾರೆ. ಕತ್ತಲಾದರೂ ಮನೆಗೆ ಬಾರದೇ ಇದ್ದವರನ್ನು ಹುಡುಕಿಕೊಂಡು ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಒಪ್ಪಿಗೆಯಿಲ್ಲದವನ ಜೊತೆ ಮದುವೆ: ಮಗನ ಸಹಾಯ ಪಡೆದು ಮಗಳ ತಲೆಯನ್ನೇ ಕತ್ತರಿಸಿದ ತಾಯಿ!
ಆಗ ನಡೆದ ಘರ್ಷಣೆಯಲ್ಲಿ ಮತ್ತೆ ಐವರು ನಾಗರಿಕರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ನಾಗರಿಕರ ಹತ್ಯೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಅಸ್ಸಾಂ ರೈಫಲ್ಸ್‌ನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಆಗ ಸೈನಿಕರು ಹಾರಿಸಿದ ಗುಂಡಿಗೆ ಮತ್ತೊಬ್ಬ ನಾಗರಿಕ ಬಲಿಯಾಗಿದ್ದಾರೆ.