ನಾಗಾಲ್ಯಾಂಡ್ ನಾಗರಿಕರ ಹತ್ಯೆ: ಭದ್ರತಾ ಪಡೆಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು
ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಸೇನೆಯ 21ನೇ ಪ್ಯಾರಾ ವಿಶೇಷ ಪಡೆ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಸೋಮವಾರ ಕೊಲೆ ಪ್ರಕರಣ ದಾಖಲಿಸಿದ್ದಾರೆ.
Published: 06th December 2021 04:51 PM | Last Updated: 06th December 2021 04:51 PM | A+A A-

ಮೋನ್ ಪಟ್ಟಣದಲ್ಲಿ ಭದ್ರತಾ ಸಿಬ್ಬಂದಿ
ಕೋಹಿಮಾ: ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಸೇನೆಯ 21ನೇ ಪ್ಯಾರಾ ವಿಶೇಷ ಪಡೆ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಸೋಮವಾರ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ ಭದ್ರತಾ ಪಡೆಗಳಿಂದ 14 ನಾಗರಿಕರ ಹತ್ಯೆ ಖಂಡಿಸಿ ಬುಡಕಟ್ಟು ಸಂಸ್ಥೆಗಳು ಬಂದ್‌ಗೆ ಕರೆ ನೀಡಿವೆ.
ಮೋನ್ ಪಟ್ಟಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಭದ್ರತೆ ಬಿಗಿಗೊಳಿಸಲಾಗಿದೆ. ಆದರೂ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಸೈನಿಕರಿಂದ ನಾಗಾಲ್ಯಾಂಡ್ ನಾಗರೀಕರ ಹತ್ಯೆ: ಕೋರ್ಟ್ ಆಫ್ ಎನ್ ಕ್ವೈರಿ ಆದೇಶಿಸಿದ ಭಾರತೀಯ ಸೇನೆ!!
ಈಮಧ್ಯೆ, ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಾಗರಿಕರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಗೊಂದಲ ಉಂಟಾಗಿದೆ. ಜಿಲ್ಲೆಯಲ್ಲಿನ ಕೊನ್ಯಾಕ್ ಯೂನಿಯನ್, ಗುಂಡಿನ ದಾಳಿಯಲ್ಲಿ 17 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಹೇಳಿತ್ತು. ಆದರೆ ನಂತರ ಆ ಸಂಖ್ಯೆಯನ್ನು 14ಕ್ಕೆ ಇಳಿಸಲಾಗಿದೆ.
ಇದನ್ನು ಓದಿ: 'ನಾಗಲ್ಯಾಂಡ್ ನಲ್ಲಿ ನಾಗರಿಕರ ಹತ್ಯೆ ದುರದೃಷ್ಟಕರ', ಹೊಣೆ ಹೊತ್ತುಕೊಂಡ ಸೇನೆ, ಉನ್ನತ ಮಟ್ಟದ ತನಿಖೆಗೆ ಆದೇಶ
ಆದಾಗ್ಯೂ, ಶನಿವಾರ ಮತ್ತು ಭಾನುವಾರದಂದು ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ 14 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.