2022ರ ಅಂತ್ಯದ ವೇಳೆಗೆ ಗಗನಯಾನಕ್ಕೂ ಮುನ್ನ ಎರಡು ಮಾನವರಹಿತ ಮಿಷನ್: ಕೇಂದ್ರ ಸಚಿವ

2022ರ ಅಂತ್ಯದ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ 'ಗಗನಯಾನ' ಯೋಜನೆಗೂ ಮುನ್ನ ಭಾರತ ಮುಂದಿನ ವರ್ಷ ಎರಡು ಮಾನವರಹಿತ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು...
ಕೇಂದ್ರ ಸಚಿವ ಜಿತೇಂದ್ರ ಸಿಂಗ್  
ಕೇಂದ್ರ ಸಚಿವ ಜಿತೇಂದ್ರ ಸಿಂಗ್  

ನವದೆಹಲಿ: 2022ರ ಅಂತ್ಯದ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ 'ಗಗನಯಾನ' ಯೋಜನೆಗೂ ಮುನ್ನ ಭಾರತ ಮುಂದಿನ ವರ್ಷ ಎರಡು ಮಾನವರಹಿತ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಇತರ ಬಾಹ್ಯಾಕಾಶ ಯೋಜನೆಗಳ ಬಗ್ಗೆಯೂ ಮಾಹಿತಿ ಮಾಹಿತಿ ನೀಡಿದ ಜಿತೇಂದ್ರ ಸಿಂಗ್ ಅವರು, ಶುಕ್ರ ಮಿಷನ್ 2022ಕ್ಕೆ, ಸೌರ ಮಿಷನ್ 2022-23 ಮತ್ತು 2030ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಯೋಜಿಸಲಾಗಿದೆ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಾಹ್ಯಾಕಾಶ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಸಿಂಗ್ ತಿಳಿಸಿದ್ದಾರೆ.

"ಮುಂದಿನ ವರ್ಷ ನಾವು ಮಾನವ ಸಹಿತ ಗಗನಯಾನ ಉಡ್ಡಯನ ಮಾಡುವ ಮೊದಲು ಎರಡು ಮಾನವರಹಿತ ಮಿಷನ್‌ಗಳನ್ನು ಉಡಾವಣೆ ಮಾಡಲಾಗುವುದು. ಅದು ಕೂಡ ಯೋಜನೆಯಲ್ಲಿದೆ" ಎಂದು ಅವರು ಹೇಳಿದರು.

ಮುಂದಿನ ವರ್ಷದ ಆರಂಭದಲ್ಲಿ, ಭಾರತವು 2022 ರ ಅಂತ್ಯದ ವೇಳೆಗೆ ಗಗನಯಾನಕ್ಕೂ ಮೊದಲು ಮಾನವರಹಿತ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದೆ. ಇದು 'ವಾಯುಮಿತ್ರ' ಎಂದು ಹೆಸರಿಸಲಾದ ರೋಬೋಟ್‌ಗನ್ನು ಹೊಂದಿರುತ್ತದೆ. ಅದನ್ನು ಅನುಸರಿಸಿ, ನಾವು ಬಹುಶಃ 2023 ರಲ್ಲಿ ಮಾನವ ಸಹಿತ ಗಗನಯಾನ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com