ಓಮಿಕ್ರಾನ್ ರೂಪಾಂತರಿ
ದೇಶ
ಬ್ರಿಟನ್ ನಲ್ಲಿ ಒಮೈಕ್ರಾನ್‍ನಿಂದ ಓರ್ವ ವ್ಯಕ್ತಿ ಸಾವು
ಇಡೀ ಜಗತ್ತನ್ನು ಆತಂಕಕ್ಕೆ ತಳ್ಳುತ್ತಿರುವ ಕೋವಿಡ್-19 ಹೊಸ ರೂಪಾಂತರ ತಳಿ ಒಮೈಕ್ರಾನ್‍ನಿಂದಾಗಿ ಲಂಡನ್ನಿನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಲಂಡನ್: ಇಡೀ ಜಗತ್ತನ್ನು ಆತಂಕಕ್ಕೆ ತಳ್ಳುತ್ತಿರುವ ಕೋವಿಡ್-19 ಹೊಸ ರೂಪಾಂತರ ತಳಿ ಒಮೈಕ್ರಾನ್‍ನಿಂದಾಗಿ ಲಂಡನ್ನಿನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಒಮೈಕ್ರಾನ್‍ನಿಂದಾಗಿ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ..
ಪಶ್ಚಿಮ ಲಂಡನ್‍ನ ವ್ಯಾಕ್ಸಿನೇಷನ್ ಕ್ಲಿನಿಕ್‍ಗೆ ಭೇಟಿ ನೀಡಿದ ಬೋರಿಸ್ ಜಾನ್ಸನ್, ಒಮೈಕ್ರಾನ್ ನಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ಕೋವಿಡ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಮೂರು ನಾಲ್ಕು ಗಂಟೆಗಳ ನಮತರ ಈ ಸಾವು ವರದಿಯಾಗಿದೆ. ಯುಕೆಯಲ್ಲಿ ಭಾನುವಾರ 1239 ಒಮೈಕ್ರಾನ್ ಪ್ರಕರಣ ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ