ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಗೊಳಿಸಬೇಕು, ಪ್ರಧಾನಿ ಕ್ಷಮೆಯಾಚಿಸಬೇಕು- ರಾಹುಲ್ ಗಾಂಧಿ

ರೈತರು ಸೇರಿದಂತೆ 8 ಮಂದಿಯನ್ನು ಬಲಿಪಡೆದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಒತ್ತಾಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ರೈತರು ಸೇರಿದಂತೆ 8 ಮಂದಿಯನ್ನು ಬಲಿಪಡೆದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಒತ್ತಾಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸುವ ಸಮಯ ಬಂದಿದೆ ಎಂದು ಮಂಗಳವಾರ ಹೇಳಿದ್ದಾರೆ.

ನಾಲ್ವರು ರೈತರು ಸೇರಿದಂತೆ ಎಂಟು ಜೀವಗಳನ್ನು ಬಲಿತೆಗೆದುಕೊಂಡ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ), ಇದು ಯೋಜಿತ ಮತ್ತು ಉದ್ದೇಶಪೂರ್ವಕ ಕೃತ್ಯ. ಹೀಗಾಗಿ ಆರೋಪಿಗಳ ವಿರುದ್ಧ ಹತ್ಯೆ ಆರೋಪ ದಾಖಲಿಸುವಂತೆ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಗೆ ಒತ್ತಾಯಿಸಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಮೋದಿ ಜೀ, ಮತ್ತೊಮ್ಮೆ ಕ್ಷಮೆ ಕೇಳುವ ಸಮಯ ಬಂದಿದೆ. ಆದರೆ ಮೊದಲು ಆರೋಪಿಯ ತಂದೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ. ಸತ್ಯ ನಿಮ್ಮ ಮುಂದಿದೆ!," ಎಂದಿದ್ದಾರೆ.

"ಲಖಿಂಪುರ" ಮತ್ತು "ಕೊಲೆ" ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿರುವ ರಾಹುಲ್ ಗಾಂಧಿ, ಕೇಂದ್ರ ಸಚಿವರು ರೈತರನ್ನು ಕೊಲ್ಲಲು ಯತ್ನಿಸಿದ್ದು ಮತ್ತು ಅವರು ತಮ್ಮ ತಂಡದ ಸದಸ್ಯರಾಗಿದ್ದದ್ದು ಪ್ರಧಾನಿಗೆ ಗೊತ್ತಿದೆ ಎಂದಿದ್ದಾರೆ.

"ಎಲ್ಲರಿಗೂ ಸತ್ಯ ತಿಳಿದಿದೆ ಮತ್ತು 2-3 ದೊಡ್ಡ ಕೈಗಾರಿಕೋದ್ಯಮಿಗಳು ರೈತರ ವಿರುದ್ಧವಾಗಿದ್ದಾರೆ ಮತ್ತು ನರೇಂದ್ರ ಮೋದಿ ಅವರು ಆ ಉದ್ಯಮಿಗಳ ಪರವಾಗಿದ್ದಾರೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com