ಸ್ವರ್ಣಿಮ್ ವಿಜಯ್ ದಿವಸ್: 1971ರ ಯುದ್ಧದಲ್ಲಿ ಪಾಕ್ ವಿರುದ್ಧದ ಗೆಲುವಿಗೆ 50 ವರ್ಷದ ಸಂಭ್ರಮ, ಹುತಾತ್ಮ ವೀರ ಯೋಧರ ನೆನೆದ ಪ್ರಧಾನಿ ಮೋದಿ

ಡಿಸೆಂಬರ್ 16ನ್ನು ಭಾರತದಲ್ಲಿ ‘ವಿಜಯ ದಿವಸ’ವಾಗಿ ಆಚರಿಸಲಾಗುತ್ತದೆ. ಭಾರತವು 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಜಯಶಾಲಿಯಾದ ನೆನಪಿಗೆ ‘ವಿಜಯ ದಿವಸ’ವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ವಿಜಯಕ್ಕೆ 50ರ ಸಂಭ್ರಮ. ವಿಜಯ ದಿವಸದಂದು ಸೈನಿಕರ ಶೌರ್ಯವನ್ನು, ತ್ಯಾಗವನ್ನು, ಬಲಿದಾನವನ್ನು ಸ್ಮರಿಸಲಾಗುತ್ತದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ನವದೆಹಲಿ: ಡಿಸೆಂಬರ್ 16ನ್ನು ಭಾರತದಲ್ಲಿ ‘ವಿಜಯ ದಿವಸ’ವಾಗಿ ಆಚರಿಸಲಾಗುತ್ತದೆ. ಭಾರತವು 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಜಯಶಾಲಿಯಾದ ನೆನಪಿಗೆ ‘ವಿಜಯ ದಿವಸ’ವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ವಿಜಯಕ್ಕೆ 50ರ ಸಂಭ್ರಮ. ವಿಜಯ ದಿವಸದಂದು ಸೈನಿಕರ ಶೌರ್ಯವನ್ನು, ತ್ಯಾಗವನ್ನು, ಬಲಿದಾನವನ್ನು ಸ್ಮರಿಸಲಾಗುತ್ತದೆ.

1971 ರ ಯುದ್ಧದಲ್ಲಿ ಭಾರತೀಯ ಸೈನಿಕರು ಅಪಾರ ತ್ಯಾಗ ಮಾಡಿದ್ದರು. ಸುಮಾರು 3,900 ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಸಿದರು ಮತ್ತು 9,800 ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಎಲ್ಲರ ಹೋರಾಟದಿಂದ ಲಭಿಸಿದ ಜಯದ ಸ್ಮರಣಾರ್ಥ ‘ವಿಜಯ ದಿವಸ’ವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.

ಸರ್ಣಿಮ್ ವಿಜಯ ದಿವಸ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ವಿಜಯದಿವಸದಂದು ಮುಕ್ತಿಜೋದ್ಧ (ರಾಜಕೀಯೇತರ ಕಲ್ಯಾಣ ಸಂಘ), ಬಿರಂಗನಾಸ್ ( ಬಾಂಗ್ಲಾ ವಿಮೋಚನಾ ಯುದ್ಧದ ನಾಯಕಿಯರು), ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುತ್ತೇನೆ. ನಾವು ಒಟ್ಟಾಗಿ ಹೋರಾಡಿ ದಮನಕಾರಿ ಶಕ್ತಿಗಳನ್ನು ಸೋಲಿಸಿದ್ದೇವೆ. ಢಾಕಾದಲ್ಲಿ ರಾಷ್ಟ್ರಪತಿಗಳ ಉಪಸ್ಥಿತಿಯು ಪ್ರತಿಯೊಬ್ಬ ಭಾರತೀಯನಿಗೂ ವಿಶೇಷ ಹಾಗೂ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ಇದರಂತೆ ರಾಜನಾಥ್ ಸಿಂಗ್ ಅವರು ಕೂಡ ಟ್ವೀಟ್ ಮಾಡಿದ್ದು, 1971 ರ ಯುದ್ಧವನ್ನು 'ಭಾರತದ ಸೇನಾ ಇತಿಹಾಸದಲ್ಲಿ ಸುವರ್ಣ ಅಧ್ಯಾಯ' ಎಂದು ಕರೆದಿದ್ದಾರೆ.

“ಸ್ವರ್ಣಿಮ್ ವಿಜಯ್ ದಿವಸ್” ಸಂದರ್ಭದಲ್ಲಿ ನಾವು 1971 ರ ಯುದ್ಧದ ಸಮಯದಲ್ಲಿ ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸುತ್ತೇವೆ. 1971 ರ ಯುದ್ಧವು ಭಾರತದ ಮಿಲಿಟರಿ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿದೆ. ನಾವು ನಮ್ಮ ಶಸ್ತ್ರಸಜ್ಜಿತ ಯೋಧರು ಮತ್ತು ಅವರ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಯುದ್ಧದ ಕೊನೆಯಲ್ಲಿ ಪಾಕಿಸ್ಥಾನ ಶರಣಾಗುವ ಬಗೆಗಿನ ಫೋಟೋ ಹಂಚಿಕೊಂಡಿದ್ದಾರೆ.

ವಿಜಯ್ ದಿವಸ್‌ನ ಮಹತ್ವವೇನು? ಇಲ್ಲಿದೆ ಮಾಹಿತಿ...
ಪಾಕಿಸ್ತಾನದ ವಿರುದ್ಧ 1971ರ ಯುದ್ಧದ ಕೊನೆಯಲ್ಲಿ 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಈ ಮೂಲಕ ಭಾರತವು ಜಯಸಾಧಿಸಿತು.

ಇದು ಬಾಂಗ್ಲಾದೇಶದ ವಿಮೋಚನೆಗೆ ನಾಂದಿ ಹಾಡಿತು. ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಪಾಕಿಸ್ತಾನಿ ಸೇನೆಯ ಕಮಾಂಡರ್ ಆಗಿರುವ ಲೆಫ್ಟಿನೆಂಟ್ ಜನರಲ್ ಎಎಕೆ ನಿಯಾಜಿ ಅವರು ಭಾರತದ ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರಿಗೆ ಶರಣಾಗಲು ಒಪ್ಪಿದರು.

ಜನರಲ್ ನಿಯಾಜಿ ಡಿಸೆಂಬರ್ 16 ರ ಸಂಜೆ ಶರಣಾದರು ಮತ್ತು ಯುದ್ಧವನ್ನು ಭಾರತವು ಅಧಿಕೃತವಾಗಿ ಗೆದ್ದಿತು. ಅದಕ್ಕಾಗಿಯೇ ಈ ದಿನವನ್ನು ವಿಜಯ್ ದಿವಸ್ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಪ್ರತಿ ವರ್ಷ ಸ್ಮರಿಸಲಾಗುತ್ತದೆ.

ಬಾಂಗ್ಲಾದೇಶದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿರುವ ರಾಷ್ಟ್ರಪತಿ ಕೋವಿಂದ್
50 ವರ್ಷಗಳ ನಂತರ ಬಾಂಗ್ಲಾದೇಶ ಇಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಬಾಂಗ್ಲಾದೇಶದ ಪ್ರಥಮ ಮಹಿಳೆ ರಶೀದಾ ಹಮೀದ್ ಅವರು ಢಾಕಾದ ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ಗೌರವ ಅತಿಥಿಯಾಗಿ ವಿಜಯ ದಿನದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com