'ತಮಿಳ್ ತಾಯ್ ವಾಳ್ತು' ನಾಡಗೀತೆಯಾಗಿ ಘೋಷಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರ ತಮಿಳು ತಾಯಿಯನ್ನು ಶ್ಲಾಘಿಸುವ ಹಾಡು 'ತಮಿಳ್ ತಾಯ್ ವಾಳ್ತು' ಅನ್ನು ನಾಡಗೀತೆಯಾಗಿ ಶುಕ್ರವಾರ ಘೋಷಿಸಿದೆ ಮತ್ತು ಈ ಹಾಡು ಹಾಡುವ ವೇಳೆ ಹಾಜರಿದ್ದವರೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು...
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್

ಚೆನ್ನೈ: ತಮಿಳುನಾಡು ಸರ್ಕಾರ ತಮಿಳು ತಾಯಿಯನ್ನು ಶ್ಲಾಘಿಸುವ ಹಾಡು 'ತಮಿಳು ತಾಯ್ ವಾಳ್ತು' ಅನ್ನು ನಾಡಗೀತೆಯಾಗಿ ಶುಕ್ರವಾರ ಘೋಷಿಸಿದೆ ಮತ್ತು ಈ ಹಾಡು ಹಾಡುವ ವೇಳೆ ಹಾಜರಿದ್ದವರೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಆದೇಶಿಸಿದೆ.

'ತಮಿಳ್ ತಾಯ್ ವಾಳ್ತು' ಕೇವಲ ಪ್ರಾರ್ಥನಾ ಗೀತೆ. ರಾಷ್ಟ್ರಗೀತೆ ಅಲ್ಲ. ಈ ಹಾಡು ಹಾಡುವ ವೇಳೆ ಎಲ್ಲರೂ ಎದ್ದು ನಿಲ್ಲುವ  ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ 'ತಮಿಳ್ ತಾಯ್ ವಾಳ್ತು'ಗೆ ನಾಡಗೀತೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ.

55 ಸೆಕೆಂಡುಗಳ ಈ ಹಾಡನ್ನು ಹಾಡುವಾಗ ವಿಕಲಚೇತನರನ್ನು ಹೊರತುಪಡಿಸಿ ಎಲ್ಲರೂ ಕಡ್ಡಾಯವಾಗಿ ಎದ್ದುನಿಲ್ಲಬೇಕು ಎಂದು ರಾಜ್ಯ ಸರ್ಕಾರ ಆದೇಶ(ಜಿಒ) ಹೊರಡಿಸಿರುವುದಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೊದಲು ಇದನ್ನು ಹಾಡಬೇಕು ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com