ಬಲಾಸೋರ್ (ಒಡಿಶಾ): ಒಡಿಶಾ ಕರಾವಳಿಯ ಬಾಲಾಸೋರ್ ನಿಂದ ಭಾರತವು ಪರಮಾಣು ಸಾಮರ್ಥ್ಯ ಕಾರ್ಯತಂತ್ರ ಹೊಂದಿರುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿಯು ಸಾವಿರದಿಂದ 2 ಸಾವಿರ ಕಿಲೋ ಮೀಟರ್ ದೂರದವರೆಗೆ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಪರೀಕ್ಷಾರ್ಥ ಉಡಾವಣೆಯ ಯಶಸ್ಸಿನ ಬಗ್ಗೆ ಸರ್ಕಾರದ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. ಪರೀಕ್ಷಾ ಉಡಾವಣೆ ವೇಳೆ ಸಾಕಷ್ಟು ಹೊಸ ಗುಣಲಕ್ಷಣಗಳನ್ನು ಸೇರ್ಪಡೆ ಮಾಡಲಾಗಿದೆ. ಅತ್ಯುನ್ನತ ಮಟ್ಟದ ನಿಖರತೆಯ ಉದ್ದೇಶವನ್ನು ಈ ಕ್ಷಿಪಣಿ ಪರೀಕ್ಷೆ ಈಡೇರಿಸಿದೆ.
ಕಳೆದ ಬಾರಿ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಜೂನ್ 28ರಂದು ಮಾಡಲಾಗಿತ್ತು. ಕ್ಷಿಪಣಿಯ ಅಭಿವೃದ್ಧಿಯು ಮುಕ್ತಾಯದ ಹಂತದಲ್ಲಿದ್ದು ಭಾರತೀಯ ಸೇನೆಯ ಮೂರೂ ಪಡೆಗಳ ಕಾರ್ಯತಂತ್ರಗಳಿಗೆ ಸದ್ಯದಲ್ಲಿಯೇ ಕಾರ್ಯನಿರ್ವಹಣೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಕಾರ್ಯತಂತ್ರದ ಕ್ಷಿಪಣಿಗಳನ್ನು ಮತ್ತಷ್ಟು ಬಲಪಡಿಸುವ ಪ್ರಕ್ರಿಯೆಯಲ್ಲಿ ಭಾರತವಿದೆ. ಅಗ್ನಿ -5 ಕ್ಷಿಪಣಿಯನ್ನು ಕೂಡ ಇತ್ತೀಚೆಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು.
Advertisement