ಗುಜರಾತ್‌: ಬ್ರಿಟನ್ ನಿಂದ ವಾಪಸ್ಸಾದ ಇಬ್ಬರಿಗೆ ಓಮಿಕ್ರಾನ್, ಸೋಂಕಿತರ 9ಕ್ಕೆ ಏರಿಕೆ

ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ 45 ವರ್ಷದ ಎನ್‌ಆರ್‌ಐ ಮತ್ತು ಹದಿಹರೆಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಓಮಿಕ್ರಾನ್ ಸಾಂದರ್ಭಿಕ ಚಿತ್ರ
ಓಮಿಕ್ರಾನ್ ಸಾಂದರ್ಭಿಕ ಚಿತ್ರ

ಅಹಮದಾಬಾದ್: ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ 45 ವರ್ಷದ ಎನ್‌ಆರ್‌ಐ ಮತ್ತು ಹದಿಹರೆಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇದರೊಂದಿಗೆ ಗುಜರಾತ್ ನಲ್ಲಿ ಕೋವಿಡ್-19 ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 15 ರಂದು ಬ್ರಿಟನ್ ನಿಂದ ಆಗಮಿಸಿದ ಕೂಡಲೇ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಎನ್‌ಆರ್‌ಐ(ಅನಿವಾಸಿ ಭಾರತೀಯ) ಕೊರೋನಾ ವೈರಸ್ ಪಾಸಿಟಿವ್ ಬಂದಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಅವರ ಮಾದರಿಯನ್ನು ನಂತರ ಓಮಿಕ್ರಾನ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಪಾಸಿಟಿವ್ ಬಂದಿದೆ" ಎಂದು ಆನಂದ್ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಂಟಿ ಛಾರಿ ಅವರು ಹೇಳಿದ್ದಾರೆ.

ಓಮಿಕ್ರಾನ್ ದೃಢಪಟ್ಟ ಇಬ್ಬರು ರೋಗಿಗಳು ಪ್ರಸ್ತುತ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ ಛಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com