ನಿತೀಶ್ ಕುಮಾರ್
ನಿತೀಶ್ ಕುಮಾರ್

ವರದಕ್ಷಿಣೆ ರಹಿತ ಮದುವೆಗಳಲ್ಲಿ ಮಾತ್ರ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗಿ

ವರದಕ್ಷಿಣೆ ರಹಿತ ವಿವಾಹ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ಕುಟುಂಬದಿಂದ ಸ್ಪಷ್ಟವಾದ ಘೋಷಣೆ ಮಾಡದಿದ್ದರೆ ಯಾವುದೇ ಮದುವೆಗೂ ಹಾಜರಾಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಘೋಷಿಸಿದ್ದಾರೆ.

ಪಾಟ್ನಾ: ವರದಕ್ಷಿಣೆ ರಹಿತ ವಿವಾಹ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ಕುಟುಂಬದಿಂದ ಸ್ಪಷ್ಟವಾದ ಘೋಷಣೆ ಮಾಡದಿದ್ದರೆ ಯಾವುದೇ ಮದುವೆಗೂ ಹಾಜರಾಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಘೋಷಿಸಿದ್ದಾರೆ.

ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ತಮ್ಮ ಸಮಾಜಿಕ ಸುಧಾರ್ ಅಭಿಯಾನ(ಸಮಾಜ ಸುಧಾರಣಾ ಅಭಿಯಾನ)ಕ್ಕೆ ಚಾಲನೆ ನೀಡಿ ಮಾತನಾಡಿದ ನಿತೀಶ್ ಕುಮಾರ್ ಅವರು, “ಮದುವೆ ಕಾರ್ಡ್‌ಗಳಲ್ಲಿ ಇದು ವರದಕ್ಷಿಣೆ ಪಡೆಯದ ಮದುವೆ ಎಂಬ ಘೋಷಣೆಯನ್ನು ಹೊಂದಿರದಿದ್ದರೆ ಆಪ್ತರು ಸೇರಿದಂತೆ ನಾನು ಯಾವುದೇ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ" ಎಂದು ಹೇಳಿದ್ದಾರೆ.

ಸಮಾಜವನ್ನು ದೀರ್ಘಕಾಲ ಕಾಡುತ್ತಿರುವ ವರದಕ್ಷಿಣೆ ನಿಷೇಧ ಮತ್ತು ಬಾಲ್ಯವಿವಾಹದಂತಹ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಲು ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಎಂದು ಬಿಹಾರ ಸಿಎಂ ತಿಳಿಸಿದ್ದಾರೆ.

ಸಾಮಾಜಿಕ ಸುಧಾರಣೆಗಳಿಲ್ಲದೆ ಅಭಿವೃದ್ಧಿಯ ಹಿಂದಿನ ಉದ್ದೇಶವು ನಿಷ್ಪ್ರಯೋಜಕವಾಗಿದೆ. ಅದಕ್ಕಾಗಿಯೇ ನಾನು ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ನಿರಂತರವಾಗಿ ಅದರ ಮೇಲೆ ಕೆಲಸ ಮಾಡುತ್ತಿದ್ದೇನೆ ಎಂದರು.

ಜನಸಾಮಾನ್ಯರ ಹಿತಾಸಕ್ತಿಗಾಗಿ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕುವ ಗುರಿಯನ್ನು ಹೊಂದಿರುವ ಸಾಮಾಜಿಕ ಸುಧಾರಣಾ ಅಭಿಯಾನವನ್ನು ವೇಗಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರಿಗೆ ನಿತೀಶ್ ಕುಮಾರ್ ಪ್ರೋತ್ಸಾಹಿಸಿದರು.

Related Stories

No stories found.

Advertisement

X
Kannada Prabha
www.kannadaprabha.com