ಓಮಿಕ್ರಾನ್ ಹೆಚ್ಚಳ: ಬೆಂಗಳೂರು ಸೇರಿದಂತೆ 8 ನಗರಗಳಲ್ಲಿ ಎಲ್ಲಾ ಪಾಸಿಟಿವ್ ಕೇಸುಗಳ ಜಿನೋಮ್ ಸೀಕ್ವೆನ್ಸಿಂಗ್; ಕೇಂದ್ರ ಸರ್ಕಾರ ನಿರ್ಧಾರ

ದೇಶದ ಏಳು ರಾಜ್ಯಗಳ 8 ನಗರಗಳಲ್ಲಿ ಓಮಿಕ್ರಾನ್ ಸೋಂಕು ಸಮುದಾಯ ಮಟ್ಟಕ್ಕೆ ಹರಡಿರಬಹುದು ಎಂಬ ಸಂಶಯದಿಂದ ಕೇದ್ರ ಸರ್ಕಾರ ಕೋವಿಡ್ ಪಾಸಿಟಿವ್ ಆರ್ ಟಿ-ಪಿಸಿಆರ್ ಸ್ಯಾಂಪಲ್ ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ನಡೆಸಲು ನಿರ್ಧರಿಸಿದೆ.
ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಪ್ರಯೋಗಾಲಯ
ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಪ್ರಯೋಗಾಲಯ

ನವದೆಹಲಿ: ದೇಶದ ಏಳು ರಾಜ್ಯಗಳ 8 ನಗರಗಳಲ್ಲಿ ಓಮಿಕ್ರಾನ್ ಸೋಂಕು ಸಮುದಾಯ ಮಟ್ಟಕ್ಕೆ ಹರಡಿರಬಹುದು ಎಂಬ ಸಂಶಯದಿಂದ ಕೇದ್ರ ಸರ್ಕಾರ ಕೋವಿಡ್ ಪಾಸಿಟಿವ್ ಆರ್ ಟಿ-ಪಿಸಿಆರ್ ಸ್ಯಾಂಪಲ್ ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ನಡೆಸಲು ನಿರ್ಧರಿಸಿದೆ. ಮುಂಬೈ, ಪುಣೆ, ದೆಹಲಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಭುವನೇಶ್ವರ ಮತ್ತು ಕೋಲ್ಕತ್ತಾ ನಗರಗಳು ಆ ಎಂಟು ನಗರಗಳಾಗಿವೆ.

ಈ ಹಂತದಲ್ಲಿ ದೃಢಪಡಿಸಬೇಕಾದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರದ ಸೂಚ್ಯಂಕವೆಂದರೆ ದೊಡ್ಡ ನಗರಗಳಲ್ಲಿನ ಸಮುದಾಯದಲ್ಲಿ ಓಮಿಕ್ರಾನ್ ಪ್ರಸರಣವಾಗಿದೆ ಎಂದು ಏಳು ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ ಎಂದು  ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ಮುಖ್ಯಸ್ಥ ಸುಜೀತ್ ಕುಮಾರ್ ಸಿಂಗ್ ಹೇಳಿದ್ದಾರೆ. 

ಕಳೆದ ವಾರ ಈ ರಾಜ್ಯಗಳ ರಾಜ್ಯ ವಿಚಕ್ಷಣಾ ಅಧಿಕಾರಿಗಳೊಂದಿಗಿನ ಸಭೆಯನ್ನು ಉಲ್ಲೇಖಿಸಿದ ಸುಜೀತ್ ಕುಮಾರ್ ಸಿಂಗ್, ಓಮಿಕ್ರಾನ್ ಸಮುದಾಯ ಪ್ರಸರಣವನ್ನು ಮೇಲ್ವಿಚಾರಣೆ ಮಾಡಲು ಎಂಟು ನಗರಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು. ಅದಕ್ಕೆ ಅನುಗುಣವಾಗಿ, INSACOG ಜೀನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳೊಂದಿಗೆ (IGSLs) ಸಮಾಲೋಚನೆಯಲ್ಲಿ ನಡೆಸಲಾಗಿದೆ. ಈ ನಗರಗಳಿಂದ ಎಲ್ಲಾ RT-PCR ಕೋವಿಡ್ ಪಾಸಿಟಿವ್ ಮಾದರಿಗಳನ್ನು ನಿಗದಿತ ಪ್ರಯೋಗಾಲಯಗಳಲ್ಲಿ ಸಂಪೂರ್ಣ ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದರು. 

ಈಗಿನಂತೆ, ಕೋವಿಡ್ ಓಮಿಕ್ರಾನ್ ರೂಪಾಂತರಿ ಸಮುದಾಯ ಮಟ್ಟದಲ್ಲಿ ಹರಡಿದೆಯೇ ಎಂದು ನೋಡಲು ಎಲ್ಲಾ RT-PCR ಮಾದರಿಗಳನ್ನು ಪರೀಕ್ಷಿಸುವುದು ಸಮಸ್ಯೆಯಾಗುವುದಿಲ್ಲ, ಓಮಿಕ್ರಾನ್ ಕಳೆದೊಂದು ವಾರದಿಂದ ಹೆಚ್ಚುತ್ತಿದ್ದರೂ ಇನ್ನೂ ನಿಯಂತ್ರಣ ಮೀರಿ ಹೋಗಿಲ್ಲ. ಎಲ್ಲಾ ಕೋವಿಡ್-ಪಾಸಿಟಿವ್ ಮಾದರಿಗಳನ್ನು ಈ ಪರೀಕ್ಷೆಗೆ ಒಳಪಡಿಸುವುದರಿಂದ ಸಮುದಾಯದಲ್ಲಿ ರೂಪಾಂತರಿ ವಕ್ಕರಿಸಿದೆಯೇ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು. 

ಕೇಂದ್ರ ಆರೋಗ್ಯ ಸಚಿವಾಲಯ ಪ್ರತ್ಯೇಕ ದಾಖಲೆಯನ್ನು ತಯಾರಿಸಿದ್ದು ಅದರ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ಅದರ ಪ್ರಕಾರ ಇದುವರೆಗೆ ದೇಶದಲ್ಲಿ 222 ಓಮಿಕ್ರಾನ್ ಪ್ರಕರಣ ದೃಢಪಟ್ಟಿದೆ. ಇವರಲ್ಲಿ ಸುಮಾರು 60 ರೋಗಿಗಳು ವಿದೇಶಗಳಿಂದ ಪ್ರಯಾಣ ಮಾಡಿ ಬಂದವರಲ್ಲ ಅಥವಾ ವಿದೇಶಗಳಿಂದ ಬಂದು ಕೋವಿಡ್ ಹೊಂದಿರುವವರ ಜೊತೆ ಸಂಪರ್ಕ ಹೊಂದಿರುವವರಲ್ಲ. ದೆಹಲಿಯಲ್ಲಿ ಮೂವರು ಸ್ಥಳೀಯ ಕ್ಲಸ್ಟರ್ ನಿಂದ ಗುರುತಿಸಲ್ಪಟ್ಟವರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com