ಕೋವಿಡ್-19: ತಮಿಳುನಾಡಿನಲ್ಲಿ ಒಂದೇ ದಿನ 33 ಮಂದಿಗೆ ಓಮೈಕ್ರಾನ್ ಪಾಸಿಟಿವ್
ತಮಿಳುನಾಡಿನಲ್ಲಿ ಗುರುವಾರ ಒಂದೇ ದಿನ 33 ಮಂದಿಗೆ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
Published: 23rd December 2021 01:54 PM | Last Updated: 23rd December 2021 01:56 PM | A+A A-

ಸಾಂದರ್ಭಿಕ ಚಿತ್ರ
ಚೆನ್ನೈ: ತಮಿಳುನಾಡಿನಲ್ಲಿ ಗುರುವಾರ ಒಂದೇ ದಿನ 33 ಮಂದಿಗೆ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಈ ಎಲ್ಲಾ ಸೋಂಕಿತರು ಲಕ್ಷಣರಹಿತರಾಗಿದ್ದು, ಸ್ವಲ್ಪ ತಲೆತಿರುಗುವಿಕೆ ಮತ್ತು ತಲೆ ನೋವು, ಗಂಟಲು ನೋವಿನಂತಹ ಸಣ್ಣ ಸಮಸ್ಯೆಗಳೊಂದಿಗೆ "ಉತ್ತಮವಾಗಿದ್ದಾರೆ" ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ಇದನ್ನು ಓದಿ: ದೇಶದಲ್ಲಿ ಓಮಿಕ್ರಾನ್ ಕೇಸು 236ಕ್ಕೆ ಏರಿಕೆ: 7,495 ಹೊಸ ಕೋವಿಡ್ ಪ್ರಕರಣ, 434 ಮಂದಿ ಸಾವು
ಈ 33 ಓಮೈಕ್ರಾನ್ ಸೋಂಕಿತರಲ್ಲಿ ರಾಜ್ಯದ ಮೊದಲ ಪ್ರಕರಣದ ಸಂಪರ್ಕಿತರು ಸೇರಿದ್ದಾರೆ. ನೈಜೀರಿಯಾದಿಂದ ದೋಹಾ ಮೂಲಕ ಚೆನ್ನೈಗೆ ಆಗಮಿಸದ ವಿಮಾನ ಪ್ರಯಾಣಿಕರಲ್ಲೂ ಓಮಿಕ್ರಾನ್ ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ ಸುಬ್ರಮಣಿಯನ್ ಅವರು ತಿಳಿಸಿದ್ದಾರೆ.
"ಎಲ್ಲಾ 34(ಮೊದಲ ಪ್ರಕರಣ ಸೇರಿದಂತೆ) ಲಕ್ಷಣರಹಿತರಾಗಿದ್ದಾರೆ ಮತ್ತು ತಲೆತಿರುಗುವಿಕೆ ಮತ್ತು ತಲೆ ನೋವು ಹಾಗೂ ಗಂಟಲು ನೋವು ಹೊಂದಿದ್ದಾರೆ ಮತ್ತು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ತಮಿಳುನಾಡು ಸಚಿವರು ಹೇಳಿದ್ದಾರೆ.