ಸಾಂದರ್ಭಿಕ ಚಿತ್ರ
ದೇಶ
ಭಾರತೀಯ ರೈಲ್ವೇಸ್ ತೀವ್ರ ನಷ್ಟದಲ್ಲಿರುವುದು ಸಿಎಜಿ ವರದಿಯಿಂದ ಬಹಿರಂಗ: ರೈಲ್ವೇಸ್ ಲಾಭದಲ್ಲಿದೆ ಎಂದಿದ್ದ ಕೇಂದ್ರ ಸರ್ಕಾರ
ಕಳೆದ ಒಂದೇ ವರ್ಷದಲ್ಲಿ ಭಾರತೀಯ ರೈಲ್ವೇಗೆ 26 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ನವದೆಹಲಿ: ಭಾರತೀಯ ರೈಲ್ವೇ ಲಾಭದಲ್ಲಿ ನಡೆಯುತ್ತಿದೆ ಎನ್ನುವ ಕೇಂದ್ರ ಸರ್ಕಾರದ ಘೋಷಣೆಗೆ ವಿರುದ್ಧವಾದ ವರದಿ ಆಡಿಟರ್ ಜನರಲ್ ಕಛೇರಿಯಿಂದ ಹೊರಬಿದ್ದಿದೆ.
ಭಾರತೀಯ ಆಡಿಟರ್ ಜನರಲ್ ನೀಡಿರುವ ವರದಿಯಲ್ಲಿ ಭಾರತೀಯ ರೈಲ್ವೇ ತೀವ್ರ ನಷ್ಟ ಅನುಭವಿಸುತ್ತಿರುವುದಾಗಿ ಹೇಳಲಾಗಿದೆ. ಕಳೆದ ಒಂದೇ ವರ್ಷದಲ್ಲಿ ಭಾರತೀಯ ರೈಲ್ವೇಗೆ 26 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಭಾರತೀಯ ರೈಲ್ವೇಸ್ 1,500 ಕೋಟಿ ರೂ. ಲಾಭ ದಾಖಲಿಸಿದೆ ಎಂದು ಹೇಳಿಕೊಂಡಿತ್ತು. ಇದರಿಂದಾಗಿ ಟಿಕೆಟ್ ದರ ಪರಿಷ್ಕರಣೆಗೆ ಸಿಎಜಿ ಸಲಹೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ