ಬಿಹಾರ: ನೂತನವಾಗಿ ಆಯ್ಕೆಯಾದ ಪಂಚಾಯತ್ ಮುಖಂಡನನ್ನು ಹತ್ಯೆಗೈದ ಮಾವೋವಾದಿಗಳು

ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಹೊಸದಾಗಿ ಚುನಾಯಿತರಾದ ಪಂಚಾಯತ್ ಮುಖಂಡರನ್ನು ಶಂಕಿತ ಮಾವೋವಾದಿಗಳು ಹತ್ಯೆಗೈದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಹೊಸದಾಗಿ ಚುನಾಯಿತರಾದ ಪಂಚಾಯತ್ ಮುಖಂಡರನ್ನು ಶಂಕಿತ ಮಾವೋವಾದಿಗಳು ಹತ್ಯೆಗೈದಿದ್ದಾರೆ.

ಡಿಸೆಂಬರ್ 23 ರಂದು ನಡೆದ ಚುನಾವಣೆಯಲ್ಲಿ ಪರ್ಮಾನಂದ್ ತುಡ್ಡು ಅವರನ್ನು ಆಯ್ಕೆ ಮಾಡಲಾಗಿತ್ತು.  ಹರಿತವಾದ ಆಯುಧದಿಂದ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ.

ಬ್ಲಾಕ್ ಹೆಡ್ ಕ್ವಾರ್ಟರ್ಸ್ ಧಾರಾರಾದಲ್ಲಿ ಮುಖಿಯಾ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸುವ ಒಂದೆರಡು ದಿನಗಳ ಮೊದಲು ಈ ಘಟನೆ ನಡೆದಿದೆ. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ 11 ಹಂತದ ಚುನಾವಣೆಯಲ್ಲಿ ಅವರು ಅಜೀಂಪುರ ಪಂಚಾಯತ್‌ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು.

ಮುಖಿಯಾ ಹತ್ಯೆಯನ್ನು ದೃಢಪಡಿಸಿದ ಉಪವಿಭಾಗದ ಪೊಲೀಸ್ ಅಧಿಕಾರಿ ನಂದ್ ಜಿ ಪ್ರಸಾದ್ ಅವರು ಗುರುವಾರ ತಡರಾತ್ರಿ ಅವರ ಸ್ಥಳೀಯ ಗ್ರಾಮವಾದ ಮಥುರಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪಿನಿಂದ ಮುಖಿಯಾ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದರು. ಸಮೀಪದ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com