ಮಹಾರಾಷ್ಟ್ರ: ಎರಡು ಹೊಸ ಓಮಿಕ್ರಾನ್ ಪ್ರಕರಣ ಪತ್ತೆ, ಒಟ್ಟು ಪ್ರಕರಣಗಳ ಸಂಖ್ಯೆ 110ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ಶನಿವಾರ ಕೊರೋನಾ ರೂಪಾಂತರಿ ಓಮಿಕ್ರಾನ್ ನ ಎರಡು ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 110ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಶನಿವಾರ ಕೊರೋನಾ ರೂಪಾಂತರಿ ಓಮಿಕ್ರಾನ್ ನ ಎರಡು ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 110ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸೋಂಕು ದೃಢಪಟ್ಟಿದ್ದ 110 ಪ್ರಕರಣಗಳ ಪೈಕಿ 57 ಸೋಂಕಿತರ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಕಂಡುಬಂದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.  ಸಂಪೂರ್ಣ ಲಸಿಕೆ ಪಡೆದಿದ್ದ ಔರಂಗಬಾದ್ ನ ಇಬ್ಬರು ಪುರುಷರಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಇವರಲ್ಲಿ ಒಬ್ಬರು 50 ವರ್ಷದವರಾಗಿದ್ದರೆ, ಮತ್ತೊಬ್ಬರಿಗೆ 33 ವರ್ಷ ವಯಸ್ಸಿನವರಾಗಿದ್ದಾರೆ. 

ಒಬ್ಬರು ಇತ್ತೀಚಿಗೆ ದುಬೈಯಿಂದ ವಾಪಸ್ಸಾಗಿದ್ದರು. ಎರಡನೇ ವ್ಯಕ್ತಿ ವಿದೇಶ ಪ್ರಯಾಣದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಒಬ್ಬರಿಗೆ ರೋಗ ಲಕ್ಷಣಗಳು ಇಲ್ಲ, ಮತ್ತೊಬ್ಬರಿಗೆ ಸೌಮ್ಯ ಲಕ್ಷಣಗಳಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
 
ನವೆಂಬರ್ 1 ರಿಂದ 729 ವಿದೇಶಿ ಪ್ರಯಾಣಿಕರ ಸ್ಯಾಂಪಲ್ ಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿದೆ. ಈ ಪೈಕಿ 162  ಜನರ ಫಲಿತಾಂಶವನ್ನು ಕಾಯಲಾಗುತ್ತಿದೆ.  ಈ ಮಧ್ಯೆ ಓಮಿಕ್ರಾನ್ ಪ್ರಕರಣ ಆತಂಕದ ನಡುವೆ ಕೋವಿಡ್-19 ತಡೆಗಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಮಹಾರಾಷ್ಟ್ರ ಸರ್ಕಾರ  ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com