ಕೋವಿಡ್-19: ಮೊಲ್ನುಪಿರವಿರ್ ಮಾತ್ರೆ, ಕೋವೋವ್ಯಾಕ್ಸ್, ಕೋರ್ಬೆವ್ಯಾಕ್ಸ್ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಔಷಧ ಪ್ರಾಧಿಕಾರ ಶಿಫಾರಸು

ಓಮಿಕ್ರಾನ್ ಭೀತಿ ನಡುವೆಯೇ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೋವೊವ್ಯಾಕ್ಸ್ ಮತ್ತು ಬಯಾಲಾಜಿಕಲ್‌ ಇ ಸಂಸ್ಥೆಯ ಕೋರ್ಬೆವ್ಯಾಕ್ಸ್‌ ಕೋವಿಡ್–19 ತಡೆ ಲಸಿಕೆಗಳ ತುರ್ತು ಬಳಕೆಗೆ ಕೆಲವು ಷರತ್ತು ಆಧಾರದ ಮೇಲೆ ಅನುಮತಿ ನೀಡಲು ಶಿಫಾರಸು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಓಮಿಕ್ರಾನ್ ಭೀತಿ ನಡುವೆಯೇ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೋವೊವ್ಯಾಕ್ಸ್ ಮತ್ತು ಬಯಾಲಾಜಿಕಲ್‌ ಇ ಸಂಸ್ಥೆಯ ಕೋರ್ಬೆವ್ಯಾಕ್ಸ್‌ ಕೋವಿಡ್–19 ತಡೆ ಲಸಿಕೆಗಳ ತುರ್ತು ಬಳಕೆಗೆ ಕೆಲವು ಷರತ್ತು ಆಧಾರದ ಮೇಲೆ ಅನುಮತಿ ನೀಡಲು ಶಿಫಾರಸು ಮಾಡಿದೆ.

ಅಂತೆಯೇ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೋವಿಡ್–19ಗೆ ಸಂಬಂಧಿಸಿದ ವಿಷಯಾಧಾರಿತ ತಜ್ಞರ ಸಮಿತಿಯು (ಎಸ್‌ಇಸಿ) ಕೋವಿಡ್ ನಿಯಂತ್ರಣಕ್ಕಾಗಿ ತಯಾರಿಸಲಾಗಿರುವ ಮೊಲ್ನುಪಿರವಿರ್ ಮಾತ್ರೆಯ ತುರ್ತು ಬಳಕೆಗೂ ಶಿಫಾರಸು ಮಾಡಿದೆ. ಆಮ್ಲಜನಕದ ಮಟ್ಟ ಶೇ 93ಕ್ಕಿಂತ ಕಡಿಮೆ ಇರುವ ವಯಸ್ಕರು, ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಮಾತ್ರವೇ ಇದನ್ನು ಬಳಸಬಹುದಾಗಿದೆ ಎನ್ನಲಾಗಿದೆ. ಸದ್ಯ ಭಾರತೀಯ ಪ್ರಧಾನ ಔಷಧ ನಿಯಂತ್ರಕಕ್ಕೆ (ಡಿಸಿಜಿಐ) ಶಿಫಾರಸುಗಳನ್ನು ಕಳುಹಿಸಲಾಗಿದ್ದು, ಅಂತಿಮ ಅನುಮೋದನೆ ಸಿಗಬೇಕಿದೆ.

ತುರ್ತು ಬಳಕೆ ಅನುಮೋದನೆಗಾಗಿ ಸೀರಂ ಸಂಸ್ಥೆ ಸಲ್ಲಿಸಿರುವ ಅರ್ಜಿಗಳನ್ನು ಸೋಮವಾರ ಎರಡನೇ ಬಾರಿಗೆ ಪರಿಶೀಲಿಸಿದ ಎಸ್‌ಇಸಿ, ವಿವರವಾದ ಚರ್ಚೆಯ ಬಳಿಕ ತುರ್ತು ಬಳಕೆ ಶಿಫಾರಸು ಮಾಡಿತ್ತು. ಕೋವೊವ್ಯಾಕ್ಸ್ ಲಸಿಕೆಯ ತಯಾರಿಕೆ ಮತ್ತು ದಾಸ್ತಾನು ಮಾಡಲು ಸೀರಂಗೆ ಡಿಸಿಜಿಐ ಮೇ 17ರಂದು ಅನುಮತಿ ನೀಡಿತ್ತು. ಅದರಂತೆ ಲಸಿಕೆಯ ಉತ್ಪಾದನೆ ಮತ್ತು ದಾಸ್ತಾನು ಪ್ರಕ್ರಿಯೆಯನ್ನು ಸಂಸ್ಥೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com