ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಮಾಸ್ಕ್ ಧರಿಸುವುದಿಲ್ಲ; ನಾನೂ ಅವರನ್ನೇ ಅನುಸರಿಸುತ್ತೇನೆ: ಸಂಜಯ್ ರಾವುತ್

ಮಾಸ್ಕ್ ಧರಿಸುವ ವಿಷಯದಲ್ಲಿ ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಅನುಸರಿಸುವುದಾಗಿ ಶಿವಸೇನೆಯ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ. 
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಮಾಸ್ಕ್ ಧರಿಸುವ ವಿಷಯದಲ್ಲಿ ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಅನುಸರಿಸುವುದಾಗಿ ಶಿವಸೇನೆಯ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ. 

ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಜಯ್ ರಾವುತ್ ಅವರು ಮಾಸ್ಕ್ ಧರಿಸಿರಲಿಲ್ಲ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ರಾವುತ್, “ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮಾಸ್ಕ್ ಧರಿಸಲು ಹೇಳುತ್ತಾರೆ, ಆದರೆ ಅವರು ಮಾತ್ರ ಮಾಸ್ಕ್ ಧರಿಸುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಸ್ಕ್ ಧರಿಸಿದ್ದಾರೆ, ಆದರೆ ಮೋದಿ ರಾಷ್ಟ್ರದ ನಾಯಕ. ಆದರೆ ಅವರು ಧರಿಸುವುದಿಲ್ಲ. ನಾನು ಪ್ರಧಾನ ಮಂತ್ರಿಯ ನಡೆಯನ್ನೇ ಅನುಸರಿಸುತ್ತೇನೆ. ಆದ್ದರಿಂದ ನಾನು ಮಾಸ್ಕ್ ಅನ್ನು ಧರಿಸುವುದಿಲ್ಲ ಮತ್ತು ಜನರು ಸಹ ಮಾಸ್ಕ್ ಧರಿಸುವುದಿಲ್ಲ ಎಂದು ಲೇವಡಿ ಮಾಡಿದರು.

ಇದೀಗ ಕೆಲವೆಡೆ ನಿರ್ಬಂಧ ಹೇರಲಾಗಿದೆ. ಆದರೆ ಇದು ಆರ್ಥಿಕ ಬೆಳವಣಿಗೆಯ ಪರಿಣಾಮ ಬೀರುವುದರಿಂದ ಹಗಲಿನಲ್ಲಿ ಅಂತಹ ಯಾವುದೇ ನಿರ್ಬಂಧಗಳು ಇರಬಾರದು ಎಂದು ನಾನು ಬಯಸುತ್ತೇನೆ. ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ, ಸದಾನಂದ್ ಸುಳೆ, ಎನ್‍ಸಿಪಿ ಶಾಸಕ ಪ್ರಜಕ್ತ್ ತನ್‍ಪುರೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಆದ್ದರಿಂದ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ರಾವತ್ ಹೇಳಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com