ಎಫ್ಇಎಂಎ ಪ್ರಕರಣ: ವಿಚಾರಣೆಗೆ ಹಾಜರಾಗಲು ಯಾಮಿ ಗೌತಮ್ ಗೆ ಇಡಿ ಸಮನ್ಸ್
ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಎಫ್ಇಎಂಎ ಪ್ರಕರಣದಲ್ಲಿ ನಟಿ ಯಾಮಿ ಗೌತಮ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ್ದು ಮುಂದಿನ ವಾರ ವಿಚಾರಣೆಗೆ ಹಾಜರಾಗಬೇಕಿದೆ.
Published: 02nd July 2021 04:54 PM | Last Updated: 02nd July 2021 04:54 PM | A+A A-

ಯಾಮಿ ಗೌತಮ್-ಆದಿತ್ಯ ಧಾರ್
ಮುಂಬೈ: ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಎಫ್ಇಎಂಎ ಪ್ರಕರಣದಲ್ಲಿ ನಟಿ ಯಾಮಿ ಗೌತಮ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ್ದು ಮುಂದಿನ ವಾರ ವಿಚಾರಣೆಗೆ ಹಾಜರಾಗಬೇಕಿದೆ.
ಈ ಹಿಂದೆಯೂ ಯಾಮಿ ಗೌತಮ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಅವರು ತನಿಖಾ ಸಂಸ್ಥೆ ಎದುರು ಹಾಜರಾಗಲು ಆಗಿರಲಿಲ್ಲ. 1.5 ಕೋಟಿ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಜಮಾವಣೆಯಾಗಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಸಿವಿಲ್ ಪ್ರೊಸೀಡಿಂಗ್ಸ್ ಗೆ ಅನುಗುಣವಾಗಿ ಈ ತನಿಖೆ ನಡೆಯುತ್ತಿದೆ. ತಮಿಳು, ತೆಗುಲು ಸಿನಿಮಾಗಳಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿ ಸಿನಿಮಾಗಳಲ್ಲಿ ಯಾಮಿ ಗೌತಮ್ ನಟಿಸಿದ್ದಾರೆ. ಕಳೆದ ತಿಂಗಳು ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಅವರನ್ನು ವಿವಾಹವಾಗಿದ್ದರು.