ರಫೆಲ್ ಯುದ್ಧ ವಿಮಾನ ಖರೀದಿ ಕುರಿತು ಫ್ರಾನ್ಸ್ ನಲ್ಲಿ ತನಿಖೆ ಪ್ರಾರಂಭ: ಜೆಪಿಸಿ ತನಿಖೆಗೆ ಆದೇಶಿಸುವಂತೆ ಪ್ರಧಾನಿಗೆ ಕಾಂಗ್ರೆಸ್ ಆಗ್ರಹ
ರಫೆಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರ ನ್ಯಾಯಾಧೀಶರನ್ನು ನೇಮಕ ಮಾಡಿದ ಬೆನ್ನಲ್ಲೇ ಇತ್ತ ಭಾರತದಲ್ಲೂ ಈ ಕುರಿತಂತೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Published: 03rd July 2021 04:10 PM | Last Updated: 03rd July 2021 05:12 PM | A+A A-

ಸಂಗ್ರಹ ಚಿತ್ರ
ನವದೆಹಲಿ: ರಫೆಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರ ನ್ಯಾಯಾಧೀಶರನ್ನು ನೇಮಕ ಮಾಡಿದ ಬೆನ್ನಲ್ಲೇ ಇತ್ತ ಭಾರತದಲ್ಲೂ ಈ ಕುರಿತಂತೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತಂತೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ರಫೆಲ್ ಫೈಟರ್ ಜೆಟ್‌ಗಳ ಖರೀದಿಯಲ್ಲಿ "ಭ್ರಷ್ಟಾಚಾರ" ದ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ ತನಿಖೆಗೆ ಆದೇಶಿಸಬೇಕು. ಇದು ಸತ್ಯಾಂಶ ಬಯಲಿಗೆಳೆಯಲು ಇರುವ ಏಕೈಕ ಮಾರ್ಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮುಂದೆ ಬಂದು ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ.
ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರವು ಈಗ ಸ್ಪಷ್ಟವಾಗಿ ಹೊರಬಂದಿದೆ. ಫ್ರೆಂಚ್ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ವಿಷಯವು ರಾಷ್ಟ್ರೀಯ ಭದ್ರತೆ ಮತ್ತು ಗುರುತಿನ ಬಗ್ಗೆ ವ್ಯವಹರಿಸುವುದರಿಂದ, ನ್ಯಾಯಯುತ ಮತ್ತು ಸ್ವತಂತ್ರ ಜೆಪಿಸಿ ತನಿಖೆ ಏಕೈಕ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಈ ಹಿಂದೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಹಗರಣದ ಬಗ್ಗೆ ಧನಿ ಎತ್ತಿದ್ದರು. ಆದರೆ ಅವರ ಮಾತನ್ನು ನಿರ್ಲಕ್ಷಿಸಲಾಗಿತ್ತು. ಇದೀಗ ಸ್ವತಃ ಫ್ರಾನ್ಸ್ ಸರ್ಕಾರವೇ ಈ ಹಗರಣದ ತನಿಖೆ ನಡೆಸಲು ನ್ಯಾಯಾಧೀಶರನ್ನು ನೇಮಕ ಮಾಡಿದೆ. ರಕ್ಷಣಾ ವ್ಯವಹಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಫ್ರೆಂಚ್ ಪಬ್ಲಿಕ್ ಪ್ರಾಸಿಕ್ಯೂಷನ್ ಸಂಸ್ಥೆ ಆದೇಶಿಸಿದೆ. ಅಲ್ಲಿಗೆ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಈ ಒಪ್ಪಂದದಲ್ಲಿ ಭ್ರಷ್ಟಾಚಾರವಿದೆ ಎಂದು ಫ್ರೆಂಚ್ ಸರ್ಕಾರ ಒಪ್ಪಿಕೊಂಡಾಗ, ಹಗರಣದ ಮೂಲ ದೇಶದಲ್ಲಿ ಜೆಪಿಸಿ ತನಿಖೆ ಏಕೆ ನಡೆಸಬಾರದು? ಈ ವಿಷಯವು ಕಾಂಗ್ರೆಸ್ ವಿರುದ್ಧ ಬಿಜೆಪಿಯ ಬಗ್ಗೆ ಅಲ್ಲ, ಆದರೆ ಇದು ದೇಶದ ಭದ್ರತೆ ಮತ್ತು ಅತಿದೊಡ್ಡ ರಕ್ಷಣಾ ಒಪ್ಪಂದದಲ್ಲಿ "ಭ್ರಷ್ಟಾಚಾರ" ಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಸುರ್ಜೆವಾಲಾ ಹೇಳಿದರು.
ರಫೇಲ್ ಹಗರಣದ ಬಗ್ಗೆ ಸಂಪೂರ್ಣ ಜೆಪಿಸಿ ತನಿಖೆಗೆ ಸತ್ಯ ಏನು ಎಂಬುದನ್ನು ಬಯಲಿಗೆಳೆಯುತ್ತದೆ. ಫ್ರಾನ್ಸ್ ನಂತೆ ಪ್ರಧಾನ ಮಂತ್ರಿಯೂ ಈಗ ರಾಷ್ಟ್ರಕ್ಕೆ ಉತ್ತರಿಸಬೇಕಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ ಮತ್ತು ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ತಮ್ಮ ಜೇಬುಗಳನ್ನು ತುಂಬುಸಿಕೊಳ್ಳುತ್ತಿರುವವರ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಅಂತೆಯೇ ಜೆಪಿಸಿ ತನಿಖೆಯು ಸಾಕ್ಷಿಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ಸುಪ್ರೀಂ ಕೋರ್ಟ್ (ಎಸ್‌ಸಿ) ಅಥವಾ ಕೇಂದ್ರ ವಿಜಿಲೆನ್ಸ್ ಆಯೋಗವು ಯಾರೂ ನೋಡಲಾಗದ ಎಲ್ಲಾ ಸರ್ಕಾರಿ ಕಡತಗಳನ್ನೂ ಪರೀಕ್ಷಿಸಹುದಾಗಿದೆ. ಇದು ತನಿಖಾ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುತ್ತದೆ, ಸುಳ್ಳು ಹೇಳಿದ್ದಕ್ಕಾಗಿ ಯಾರನ್ನಾದರೂ ಶಿಕ್ಷಿಸಲು ಸಾಧ್ಯವಾಗುತ್ತದೆ ಮತ್ತು ಪ್ರಧಾನಿ, ರಕ್ಷಣಾ ಮಂತ್ರಿ ಅಥವಾ ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನಲ್ಲದೇ ಮತ್ತು ಬೇರೆಯವರನ್ನು ತನಿಖೆಗೊಳಪಡಿಸಲು ಸಾಧ್ಯವಾಗುತ್ತದೆ. ಸುಪ್ರೀಂ ಕೋರ್ಟ್ ಅಂತಿಮವಾಗಿ ಒಪ್ಪಿಕೊಂಡಂತೆ ಇದು ನ್ಯಾಯಾಲಯವು ಚರ್ಚಿಸಬೇಕಾದ ವಿಷಯವಲ್ಲ. ಅವರಿಗೆ ನ್ಯಾಯವ್ಯಾಪ್ತಿ ಇಲ್ಲ, ಸಾಕ್ಷಿಗಳು ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಲು ಅಥವಾ ಇಡೀ ಸರ್ಕಾರದ ದಾಖಲೆಗೆ ಪ್ರವೇಶವನ್ನು ಹೊಂದಲು ಅವರಿಗೆ ಅಧಿಕಾರ ಅಥವಾ ಸಾಮರ್ಥ್ಯವಿಲ್ಲ. ನ್ಯಾಯಯುತ ಸ್ವತಂತ್ರ ಜೆಪಿಸಿ ಮಾತ್ರ ಇದನ್ನು ಮಾಡಬಹುದು ಎಂದು ಹೇಳಿದರು.