1 ಕೋಟಿ ಚಂದಾದಾರರು: ತಮಿಳುನಾಡಿನ 'ವಿಲೇಜ್ ಕುಕ್ಕಿಂಗ್ ಚಾನೆಲ್'ಗೆ ಯೂಟ್ಯೂಬ್‌ನಿಂದ ಡೈಮಂಡ್ ಪ್ಲೇ ಬಟನ್!

ಗ್ರಾಮವೊಂದರ ಯುವಕರ ಯಶೋಗಾಥೆ. ಹೌದು ಯುವಕರ ತಂಡವೊಂದು ತಮ್ಮ ಅಜ್ಜನ ಜೊತೆ ಸೇರಿಕೊಂಡು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುವ ವಿಡಿಯೋವನ್ನು ತಮ್ಮ ವಿಲೇಜ್ ಕುಕ್ಕಿಂಗ್ ಚಾನೆಲ್ ಗೆ ಅಪ್ಲೋಡ್ ಮಾಡುತ್ತಿದ್ದರು. ಈ ಚಾನಲ್ ಇದೀಗ 1 ಕೋಟಿ ಚಂದಾದಾರರನ್ನು ಪಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪುದುಕ್ಕೋಟೈನ: ಗ್ರಾಮವೊಂದರ ಯುವಕರ ಯಶೋಗಾಥೆ. ಹೌದು ಯುವಕರ ತಂಡವೊಂದು ತಮ್ಮ ಅಜ್ಜನ ಜೊತೆ ಸೇರಿಕೊಂಡು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುವ ವಿಡಿಯೋವನ್ನು ತಮ್ಮ ವಿಲೇಜ್ ಕುಕ್ಕಿಂಗ್ ಚಾನೆಲ್ ಗೆ ಅಪ್ಲೋಡ್ ಮಾಡುತ್ತಿದ್ದರು. ಈ ಚಾನಲ್ ಇದೀಗ 1 ಕೋಟಿ ಚಂದಾದಾರರನ್ನು ಪಡೆದಿದೆ. 

1 ಕೋಟಿ ಚಂದಾದಾರರನ್ನು ಸಂಪಾದಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ತಮಿಳು ಯುಟ್ಯೂಬ್ ಚಾನೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಏಪ್ರಿಲ್ 2018ರಲ್ಲಿ ಪ್ರಾರಂಭವಾದ ಈ ಚಾನೆಲ್ ಈ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ಯೂಟ್ಯೂಬ್‌ನಿಂದ 'ಡೈಮಂಡ್ ಪ್ಲೇ ಬಟನ್' ಪಡೆದಿದೆ. ಈ ಚಾನೆಲ್ ಅನ್ನು ಪುದುಕ್ಕೋಟೈನ ಚಿನ್ನ ವೀರಮಂಗಲಂನ ಯುವಕರ ಗುಂಪು ನಡೆಸುತ್ತಿದೆ. ಇವರೆಲ್ಲಾ ರೈತರ ಕುಟುಂಬದಿಂದ ಬಂದಿದ್ದಾರೆ. ಸುಬ್ರಮಣಿಯನ್, ಅಯ್ಯನ್ನಾರ್, ತಮಿಳುಸೆಲ್ವನ್, ಮುತ್ತುಮಾನಿಕಂ, ಮುರುಗೇಶನ್ (ಸೋದರಸಂಬಂಧಿಗಳು) ತಮ್ಮ ಅಜ್ಜ ಪೆರಿಯಥಾಂಬಿ ಅವರೊಂದಿಗೆ ಚಾನೆಲ್ ಅನ್ನು ನಡೆಸುತ್ತಿದ್ದಾರೆ.

ಒಂದು ಕೋಟಿ ಚಂದಾದಾರರನ್ನು ದಾಟಿದ ನಂತರ, ಚಾನಲ್ ಪ್ರಾರಂಭಿಸಿರುವ ಯುವಕರು ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ತಮಿಳುನಾಡು ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ. 

ವಿಡಿಯೊಗಳನ್ನು ಚಿತ್ರೀಕರಿಸುವಾಗ ಅವರು ಬೇಯಿಸುವ ಪ್ರತಿಯೊಂದು ಖಾದ್ಯವನ್ನು ಕನಿಷ್ಠ 100 ಜನರಿಗೆ ತಯಾರಿಸಲಾಗುತ್ತದೆ. ನಂತರ ಆಹಾರವನ್ನು ಚಾರಿಟಿ ಮನೆಗಳಿಗೆ ಅಥವಾ ವಿಡಿಯೋ ಚಿತ್ರೀಕರಿಸುತ್ತಿರುವ ಹಳ್ಳಿಯ ಜನರಿಗೆ ವಿತರಿಸಲಾಗುತ್ತದೆ.

"ನಮಗೆ ಯಾವಾಗಲೂ ನೀಡುವುದನ್ನು ಕಲಿಸಲಾಗಿದೆ. ಅದಕ್ಕಾಗಿಯೇ ನಾವು 1 ಕೋಟಿ ಚಂದಾದಾರರನ್ನು ದಾಟಿದ ಕೂಡಲೇ ನಾವು ಏನಾದರೂ ಒಳ್ಳೆಯದನ್ನು ಮಾಡಲು ಬಯಸಿದ್ದೇವೆ. ನಾವು 10 ಲಕ್ಷ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಹಸ್ತಾಂತರಿಸಿದೆವು. ಕೋವಿಡ್ ವಿರುದ್ಧ ಹೋರಾಡುವ ಜನರಿಗೆ ಇದು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಈ ದೇಣಿಗೆ ನಮ್ಮೆಲ್ಲರ ವೀಕ್ಷಕರ ಪರವಾಗಿದೆ. ಅವರು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ ಎಂದು ಅಯ್ಯನಾರ್ ಹೇಳಿದರು.

ಈ ಮೈಲಿಗಲ್ಲು ದಾಟಲು ನಮ್ಮ ವೀಕ್ಷಕರು ನಮಗೆ ಸಹಾಯ ಮಾಡಿದ್ದಾರೆ. ಯೂಟ್ಯೂಬ್‌ನಿಂದ ಈ ಡೈಮಂಡ್ ಪ್ಲೇ ಬಟನ್ ಪಡೆದ ಮೊದಲ ತಮಿಳು ಸೃಷ್ಟಿಕರ್ತರು ಎಂಬ ಹೆಮ್ಮೆ ನಮಗಿದೆ. ಇದು ನಮ್ಮ ಸಾಮೂಹಿಕ ವಿಜಯ ಎಂದು ಸುಬ್ರಮಣಿಯನ್ ಹೇಳಿದರು.

ಕಳೆದ ಫೆಬ್ರವರಿಯಲ್ಲಿ ಚಾನೆಲ್‌ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದು ವಿಡಿಯೋ ಬಹಳ ಜನಪ್ರಿಯ ವಿಡಿಯೋವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com