ಶೀಘ್ರದಲ್ಲೇ ಎಲ್ಲಾ ದೇಶಗಳಲ್ಲಿಯೂ 'ಕೋವಿನ್ ಪ್ಲಾಟ್ ಫಾರಂ ಲಭ್ಯ: ಪ್ರಧಾನಿ ನರೇಂದ್ರ ಮೋದಿ

ಕೋವಿಡ್‌ ಲಸಿಕೆ ಅಭಿಯಾನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿನ್ ಪ್ಲಾಟ್ ಫಾರಂನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಶೀಘ್ರದಲ್ಲಿಯೇ ಇದು ಎಲ್ಲಾ ರಾಷ್ಟ್ರಗಳಲ್ಲಿಯೂ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೋವಿಡ್‌ ಲಸಿಕೆ ಅಭಿಯಾನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿನ್ ಪ್ಲಾಟ್ ಫಾರಂನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಶೀಘ್ರದಲ್ಲಿಯೇ ಇದು ಎಲ್ಲಾ ರಾಷ್ಟ್ರಗಳಲ್ಲಿಯೂ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಅದರ ಪರಿಣಿತಿ ಮತ್ತು ಸಂಪನ್ಮೂಲವನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಭಾರತ ಬದ್ಧವಾಗಿರುವುದಾಗಿ ಅವರು ಪ್ರತಿಪಾದಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕೋವಿನ್ ಜಾಗತಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಯಾವುದೇ ರಾಷ್ಟ್ರ, ಎಷ್ಟೇ ಶಕ್ತಿಯುತವಾಗಿದ್ದರೂ, ಈ ಸಾಂಕ್ರಾಮಿಕ ರೋಗದಂತಹ ಸವಾಲನ್ನು ಪ್ರತ್ಯೇಕವಾಗಿ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಅನುಭವ ತೋರಿಸಿದೆ. ಈ ಹೋರಾಟದಲ್ಲಿ ನಮ್ಮ ಅನುಭವಗಳು, ಪರಿಣತಿ ಮತ್ತು ಸಂಪನ್ಮೂಲಗಳನ್ನು ಜಾಗತಿಕ ಸಮುದಾಯಗಳೊಂದಿಗೆ ಹಂಚಿಕೊಳ್ಳಲು ಭಾರತ ಬದ್ಧವಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ವಿಶ್ವದೊಂದಿಗೆ ಹಂಚಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ತಂತ್ರಜ್ಞಾನವು ಅವಿಭಾಜ್ಯ ಅಂಗವಾಗಿದೆ. ಅದೃಷ್ಟವಶಾತ್, ಸಾಫ್ಟ್‌ವೇರ್ ಒಂದು ಸಂಪನ್ಮೂಲಗಳಿಲ್ಲದ ಕ್ಷೇತ್ರವಾಗಿದೆ. ಅದಕ್ಕಾಗಿಯೇ ನಾವು ಕೋವಿಡ್ ಪತ್ತೆಹಚ್ಚುವಿಕೆ ಮತ್ತು ಟ್ರ್ಯಾಕಿಂಗ್ ಆ್ಯಪ್ ಅನ್ನು ತಾಂತ್ರಿಕವಾಗಿ ಕಾರ್ಯಸಾಧ್ಯವಾದ ಕೂಡಲೇ ತೆರೆದಿದ್ದೇವೆ. ಸಾಂಕ್ರಾಮಿಕದಿಂದ ಯಶಸ್ವಿಯಾಗಿ ಹೊರಹೊಮ್ಮುವಲ್ಲಿ ಲಸಿಕೆ ಉತ್ತಮ ಭರವಸೆಯಾಗಿದೆ ಎಂದು ಪ್ರತಿಪಾದಿಸಿದ ಮೋದಿ, ನಮ್ಮ ಲಸಿಕೆ ಕಾರ್ಯತಂತ್ರ ಯೋಜನೆಯಲ್ಲಿ ಸಂಪೂರ್ಣ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಇಡೀ ವಿಶ್ವವನ್ನು ಒಂದು ಕುಟುಂಬದಂತೆ ಭಾರತೀಯ ನಾಗರಿಕತೆ ಪರಿಗಣಿಸುತ್ತದೆ. ಈ ಸಾಂಕ್ರಾಮಿಕ ಈ ಸಿದ್ಧಾಂತವನ್ನು ಅನೇಕ ಜನರಲ್ಲಿ ಮನನ ಮಾಡಿದೆ. ಆದ್ದರಿಂದ ಕೋವಿಡ್ ಲಸಿಕೆಗಾಗಿ ಅಭಿವೃದ್ಧಿಪಡಿಸಲಾದ ನಮ್ಮ ತಂತ್ರಜ್ಞಾನ ಕೋವಿನ್ ಅನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಎಲ್ಲಾ ದೇಶಗಳಲ್ಲಿ ಇದು ಲಭ್ಯವಿರಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. 

ಕೆನಡಾ, ಮೆಕ್ಸಿಕೊ, ನೈಜಿರಿಯಾ, ಪನಾಮ ಮತ್ತು ಉಗಾಂಡ ಸೇರಿದಂತೆ ಸುಮಾರು 50 ರಾಷ್ಟ್ರಗಳು ಲಸಿಕಾ ಅಭಿಯಾನದಲ್ಲಿ ಕೋವಿನ್ ಅಳವಡಿಸಿಕೊಳ್ಳಲು ಆಸಕ್ತಿ ತೋರಿವೆ. ಓಪನ್ ಸೋರ್ಸ್ ಸಾಪ್ಟ್ ವೇರ್ ನ್ನು ಉಚಿತವಾಗಿ ಹಂಚಿಕೊಳ್ಳಲು ಭಾರತ ಸಿದ್ಧವಿರುವುದಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಓ ಡಾ. ಆರ್.ಎಸ್. ಶರ್ಮಾ ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com