ಡೆಲ್ಟಾಗಿಂತ ಹೆಚ್ಚು ಅಪಾಯಕಾರಿಯಾದ ಕೋವಿಡ್ 19 'ಲ್ಯಾಂಬ್ಡಾ' ರೂಪಾಂತರ ಇನ್ನು ಭಾರತದಲ್ಲಿ ಪತ್ತೆಯಾಗಿಲ್ಲ!

ಕೋವಿಡ್ -19 ವೈರಸ್ ಲ್ಯಾಂಬ್ಡಾ ರೂಪಾಂತರವು ಭಾರತದಲ್ಲಿ ಈವರೆಗೆ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್ -19 ವೈರಸ್ ಲ್ಯಾಂಬ್ಡಾ ರೂಪಾಂತರವು ಭಾರತದಲ್ಲಿ ಈವರೆಗೆ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಎಎನ್‌ಐ ಜೊತೆ ಮಾತನಾಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಮ್ಯಾಕ್ಸಿಮಮ್ ಕಂಟೈನ್‌ಮೆಂಟ್ ಫೆಸಿಲಿಟಿ ಮುಖ್ಯಸ್ಥ ಡಾ. ಪ್ರಜ್ಞಾ ಯಾದವ್ ಅವರು, 'ಲ್ಯಾಂಬ್ಡಾ ರೂಪಾಂತರವನ್ನು 30 ದೇಶಗಳಲ್ಲಿ ಪತ್ತೆಯಾಗಿದೆ. ಲ್ಯಾಂಬ್ಡಾ ರೂಪಾಂತರವನ್ನು ಮೊದಲು 2020ರ ಡಿಸೆಂಬರ್‌ನಲ್ಲಿ ಪೆರುವಿನಲ್ಲಿ ಪತ್ತೆಯಾಗಿತ್ತು. ಈ ರೂಪಾಂತರದಿಂದ ವರದಿಯಾದ ಪ್ರಕರಣಗಳ ಸಂಖ್ಯೆ ವಿವಿಧ ದೇಶಗಳಲ್ಲಿ ಹೆಚ್ಚುತ್ತಿದೆ. ಇದು ಹೆಚ್ಚು ಹರಡಬಲ್ಲದು ಎಂದು ಸೂಚಿಸುತ್ತದೆ. 

ಇತ್ತೀಚಿನ ಅಧ್ಯಯನದಲ್ಲಿ ಎಮ್ಆರ್ಎನ್ಎ ಲಸಿಕೆ ಹಾಗೂ ಸೀರಮ್ ಲ್ಯಾಂಬ್ಡಾ ರೂಪಾಂತರವನ್ನು ತಟಸ್ಥಗೊಳಿಸಲು ಸಮರ್ಥವಾಗಿದೆ ಎಂದು ಬಹಿರಂಗಪಡಿಸಿತು. ವಿಶೇಷವೆಂದರೆ, ಲ್ಯಾಂಬ್ಡಾ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) 'ಆಸಕ್ತಿಯ ರೂಪಾಂತರ' ಎಂದು ಹೆಸರಿಸಿದೆ. 

ಭಾರತದಲ್ಲಿ ಈ ರೂಪಾಂತರ ವರದಿಯಾಗಿದೆಯಾ ಎಂಬ ಪ್ರಶ್ನೆಗೆ ಡಾ. ಯಾದವ್ ಅವರು, ಇಲ್ಲ, ಇಲ್ಲಿಯವರೆಗೆ ಭಾರತವು ಲ್ಯಾಂಬ್ಡಾ ರೂಪಾಂತರದ ಯಾವುದೇ ಪ್ರಕರಣವನ್ನು ವರದಿಯಾಗಿಲ್ಲ ಎಂದು ಹೇಳಿದರು.

'ಲ್ಯಾಂಬ್ಡಾ' ಎಂಬ ಹೊಸ ಕೋವಿಡ್ ಸ್ಟ್ರೈನ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ. ಕಳೆದ ನಾಲ್ಕು ವಾರಗಳಲ್ಲಿ 30ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್ ಆರೋಗ್ಯ ಸಚಿವಾಲಯವು ಹೇಳಿದೆ.

ಲ್ಯಾಂಬ್ಡಾ ರೂಪಾಂತರದಲ್ಲಿ ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಶಕ್ತಿಯೂ ಇದ್ದು ಬೇರೆ ಮಾದರಿಗಳಿಗಿಂತ ವೇಗವಾಗಿ ಹರಡುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com