ಎಲ್‌ಜೆಪಿಯ ಪಾರಸ್ ಗಾಗಿ ಮಂತ್ರಿ ಸ್ಥಾನ ತ್ಯಾಗ ಮಾಡಿ ಒಂದೇ ಕಲ್ಲಿಂದ ಎರಡು ಹಕ್ಕಿ ಕೊಂದ ಜೆಡಿ-ಯು!

 ಬಿಹಾರ ಸಿಎಂ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಅವರ ಹೊಸ ರಾಜಕೀಯ ಜೀವನ ಕೊನೆಗೊಳಿಸಲು ಲು ಜೆಡಿ-ಯು ಕೋಟಾದ ಎರಡನೇ ಮಂತ್ರಿ ಸ್ಥಾನವನ್ನು ತ್ಯಾಗ ಮಾಡುತ್ತದೆಯೆ?
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಅವರ ಹೊಸ ರಾಜಕೀಯ ಜೀವನ ಕೊನೆಗೊಳಿಸಲು  ಜೆಡಿ-ಯು ಕೋಟಾದ ಎರಡನೇ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದರೆ? ರಾಜಕೀಯ ತಜ್ಞರ ಪ್ರಕಾರ, ಎಲ್‌ಜೆಪಿ ಕೋಟಾದಿಂದ ಚಿರಾಗ್ ಪಾಸ್ವಾನ್ ಪ್ರವೇಶವನ್ನು ತಡೆಯುವ ಸಲುವಾಗಿ ಜೆಜೆ-ಯು ಎಲ್‌ಜೆಪಿಯ ಎದುರಾಳಿ ಗುಂಪಿನ ಪಶುಪತಿ ಕುಮಾರ್ ಪಾರಸ್ ಗೆಅವಕಾಶ ಕಲ್ಪಿಸುವ ಸಲುವಾಗಿ ಎರಡನೇ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದೆ

ವಾಸ್ತವವಾಗಿ, ಜೆಡಿ-ಯು ತ್ಯಾಗದಿಂದ ಮಾತ್ರ ಕೇಂದ್ರ ಸಂಪುಟದಲ್ಲಿ  ಪಾರಸ್ ಸೇರ್ಪಡೆ  ಸಾಧ್ಯ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಪಾರಸ್ ಅವರನ್ನು ದೆಹಲಿಗೆ ತಲುಪಿಸಲು ನಿತೀಶ್ ದೊಡ್ಡ ಪಾತ್ರ ವಹಿಸಿದ್ದರು. ಚಿರಾಗ್ ಅವರು ಪ್ರಧಾನ ಮಂತ್ರಿಯ ಸಾಮಾನ್ಯ ಆಯ್ಕೆಯಾಗಿರಬೇಕಾಗಿತ್ತು, ಏಕೆಂದರೆ ಅವರನ್ನು ಮೋದಿಯವರ ಆಪ್ತ  ಎಂದು ಪರಿಗಣಿಸಲಾಗಿದೆ. 

ಆದರೆ ಎಲ್‌ಜೆಪಿಯಲ್ಲಿನ ಭಿನ್ನಮತ, ವಿಭಜನೆಯಿಂದಾಗಿ ಕಳೆದ ವರ್ಷದ ಬಿಹಾರ ಚುನಾವಣೆಯಲ್ಲಿ ಜೆಡಿ-ಯು ವಿರುದ್ಧ ರಾಜಕೀಯ ಆಡಿದ ಚಿರಾಗ್‌ಗೆ ‘ಪಾಠ ಕಲಿಸಲು’ ಜೆಡಿ-ಯು ನಿರ್ಧರಿಸಿದೆ. ಎರಡನೇ ಮಂತ್ರಿಸ್ಥಾನದ ತ್ಯಾಗದ ಮೂಲಕ, ಜೆಡಿ-ಯು ಎರಡು ಹಕ್ಕಿಗಳನ್ನು ಒಂದೇ ಕಲ್ಲಿನಿಂದ ಹೊಡೆದಿದೆ. ಚಿರಾಗ್‌ನನ್ನು ಎನ್‌ಡಿಎ ನಿಂದ ದೂರ ಮಾಡುವಲ್ಲಿ ಮತ್ತು ಬಿಜೆಪಿಯ ಪಾಸ್ವಾನ್ ಬೆಂಬಲಿತ ಮತಗಳಿಗೆ ಹಾನಿ ಮಾಡುವಲ್ಲಿ ಯಶಸ್ವಿಯಾಗಿದೆ.

"ಜೆಡಿ-ಯುಗೆ ಕೇವಲ ಒಂದು ಮಂತ್ರಿ ಸ್ಥಾನ ಮಾತ್ರ ಸಿಕ್ಕಿರಬಹುದು ಎಂದು ಕಂಡರೂ ಇದು ಚಿರಾಗ್ ಮತ್ತು ಬಿಜೆಪಿ ಎರಡರ ವಿರುದ್ಧ ರಾಜಕೀಯ ಆಟದಲ್ಲಿ  ಯಶಸ್ವಿಯಾಗಿದೆ. ಈಗ, ಪಾಸ್ವಾನ್ ಸಮುದಾಯದಲ್ಲಿ ಬಿಜೆಪಿ ಚಿರಾಗ್ ಅವರನ್ನು ಬಳಸಿ ಎಸೆದಿದೆ ಎಂಬ ಬಲವಾದ ಸಂದೇಶ ರವಾನೆಯಾಗಿದೆ” ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ,

ರಾಜಕೀಯವು ಬಿಹಾರದಲ್ಲಿ ಅಭೂತಪೂರ್ವ ತಿರುವು ಪಡೆಯುತ್ತದೆ, ಈಗ ಚಿರಾಗ್ ಯಾವ ಮಾರ್ಗದಲ್ಲಿ ಮುಂದುವರಿಯುತ್ತಾರೆ . ಚಿರಾಗ್ ಮಹಾ ಘಟಬಂಧನ್  ಸೇರ್ಪಡೆಗೊಳ್ಳಲಿದ್ದಾರೆ ಎಂದು ಊಹಿಸಲಾಗಿದೆ. ಇದು ಪೂರ್ವ ರಾಜ್ಯದಲ್ಲಿ ಬಿಜೆಪಿಗೆ ಹಾನಿಯುಂಟು ಮಾಡಲಿದೆ ಎಂದು ವೀಕ್ಷಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com