ಪರಮ್ ಬಿರ್ ಸಿಂಗ್ ವಿರುದ್ಧದ ಎಸಿಬಿ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಅನುಮತಿ

ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಕರ್ತವ್ಯಕ್ಕೆ ಮರು ನೇಮಕ ಮಾಡುವುದಕ್ಕಾಗಿ 2 ಕೋಟಿ ರೂಪಾಯಿ ಲಂಚ ಕೇಳಿದ್ದ ಪ್ರಕರಣದಲ್ಲಿ ಮುಂಬೈ ನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಎಸಿಬಿ ತನಿಖೆಗೆ ಸರ್ಕಾರ ಅನುಮತಿ ನೀಡಿದೆ.
ಪರಮ್ ಬಿರ್ ಸಿಂಗ್
ಪರಮ್ ಬಿರ್ ಸಿಂಗ್

ಮುಂಬೈ: ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಕರ್ತವ್ಯಕ್ಕೆ ಮರು ನೇಮಕ ಮಾಡುವುದಕ್ಕಾಗಿ 2 ಕೋಟಿ ರೂಪಾಯಿ ಲಂಚ ಕೇಳಿದ್ದ ಪ್ರಕರಣದಲ್ಲಿ ಮುಂಬೈ ನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಎಸಿಬಿ ತನಿಖೆಗೆ ಸರ್ಕಾರ ಅನುಮತಿ ನೀಡಿದೆ. 

ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿ ಅನೂಪ್ ಡಾಂಗೆ ಅವರನ್ನು ಕೆಲಸಕ್ಕೆ ಪುನಃ ನೇಮಕ ಮಾಡಲು ಪರಮ್ ಬಿರ್ ಸಿಂಗ್ 2 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪವಿತ್ತು. 

ಪರಮ್ ಬಿರ್ ಸಿಂಗ್ ಅವರ ಸಂಬಂಧಿ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿ 2 ಕೋಟಿ ರೂಪಾಯಿ ನೀಡಿದರೆ ಮರಳಿ ಕೆಲಸಕ್ಕೆ ನೇಮಕ ಮಾಡಿಸುವುದಾಗಿ ಹೇಳಿದ್ದರು ಎಂದು ಅನೂಪ್ ಡಾಂಗೆ ಮಹಾರಾಷ್ಟ್ರ ಗೃಹ ಇಲಾಖೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ ಪರಮ್ ಬಿರ್ ಸಿಂಗ್ ಗೆ ಕ್ರಿಮಿನಲ್ ಗಳ ಜೊತೆ ಸಂಪರ್ಕವಿದೆ ಎಂದು ಡಾಂಗೆ ಆರೋಪಿಸಿದ್ದರು. ಅನೂಪ್ ಡಾಂಗೆ ಆರೋಪದಲ್ಲಿ ಕೆಲವು ಅಂಶಗಳಿದ್ದ ಕಾರಣ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ ಪರಮ್ ಬಿರ್ ಸಿಂಗ್ ವಿರುದ್ಧ ತನಿಖೆ ನಡೆಸಲು ಸರ್ಕಾರದಿಂದ ಅನುಮತಿ ಕೋರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com