ಗೆದ್ದುಬಿಟ್ಟೆವು ಎನ್ನುವ ಭಾವ, ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸ ಬಿಜೆಪಿ ಸೋಲಿಗೆ ಕಾರಣ: ಸುವೇಂದು ಅಧಿಕಾರಿ
ತಳಮಟ್ಟದ ರಾಜಕೀಯ ಪರಿಸ್ಥಿತಿಯನ್ನು ಸರಿಯಾರಿ ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದರಿಂದಲೇ, ಚುನಾವಣೆಯಲ್ಲಿ ಪಕ್ಷ 170 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಲು ಕಾರಣವಾಯಿತು.
Published: 19th July 2021 01:30 PM | Last Updated: 19th July 2021 02:06 PM | A+A A-

ಸುವೇಂದು ಅಧಿಕಾರಿ
ಕೊಲ್ಕೋತ: ಗೆದ್ದುಬಿಟ್ಟೆವು ಎನ್ನುವ ಸಂತೃಪ್ತಭಾವ ಮತ್ತು ಗೆದ್ದೇಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸ ಮತ್ತು ತಳಮಟ್ಟದ ರಾಜಕೀಯ ಪರಿಸ್ಥಿತಿಯನ್ನು ಸರಿಯಾರಿ ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದರಿಂದಲೇ, ಚುನಾವಣೆಯಲ್ಲಿ ಪಕ್ಷ 170 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಲು ಕಾರಣವಾಯಿತು ಎಂದು ಪಶ್ವಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿಶ್ಲೇಷಿಸಿದ್ದಾರೆ.
ಪುರ್ಬಾ ಮದಿನಿಪುರ ಜಿಲ್ಲೆಯ ಚಂಡೀಪುರದಲ್ಲಿ ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಸುವೇಂದು ಮಾತನಾಡಿದ ಅವರು ಬಿಜೆಪಿಯ ಕೆಲವು ನಾಯಕರಲ್ಲಿದ್ದ ಅತಿಯಾದ ಆತ್ಮವಿಶ್ವಾಸದಿಂದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದರು. ಟಿಎಂಸಿ ಪಕ್ಷ ತೊರೆದು ಬಿಜೆಪಿ ಸೇರಿದ ನಂತರ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲಿನ ಬಗ್ಗೆ ಪರಾಮರ್ಶಿಸಿದರು.
ಚುನಾವಣೆಯ ಮೊದಲ ಎರಡು ಹಂತದಲ್ಲಿ ನಾವೆಲ್ಲ ಚೆನ್ನಾಗಿ ಕೆಲಸ ಮಾಡಿದೆವು. ಆದರೆ, 170 ರಿಂದ 180 ಸ್ಥಾನಗಳನ್ನು ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ನಮ್ಮ ಪಕ್ಷದ ನಾಯಕರು, ತಳಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡಿರಲಿಲ್ಲ. ಹೀಗಾಗಿ ಟಿಎಂಸಿಗೆ ಅಧಿಕಾರ ಬಿಟ್ಟುಕೊಡುವಂತಾಯಿತು ಎಂದು ಹೇಳಿದರು. ನಿಗದಿತ ಗುರಿಗಳನ್ನಿಟ್ಟುಕೊಂಡ ನಂತರ, ಅದನ್ನು ತಲುಪಲು ಅಷ್ಟೇ ಪರಿಶ್ರಮದೊಂದಿಗೆ ಕೆಲಸ ಮಾಡಬೇಕು ಎಂದು ಅವರು ಹೇಳಿದರು.