ಪ್ರತಿಕೂಲ ಹವಾಮಾನ: ರಾಷ್ಟ್ರಪತಿ ಕೋವಿಂದ್ ಕಾರ್ಗಿಲ್ ಭೇಟಿ ರದ್ದು

ಕಾರ್ಗಿಲ್ ವಿಜಯ್ ದಿನದ 22 ನೇ ವಾರ್ಷಿಕೋತ್ಸವದಂದು ಡ್ರಾಸ್‌ನಲ್ಲಿರುವ ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೇಂದ್ರಾಡಳಿತ ಪ್ರದೇಶದ ಲಡಾಕ್‌ನ ಕಾರ್ಗಿಲ್‌ಗೆ ಭೇಟಿ ನೀಡುವ ಕಾರ್ಯಕ್ರಮ ಕೊನೆ ಘಳಿಗೆಯಲ್ಲಿ ಅದೂ ಪ್ರತಿಕೂಲ ಹವಾಮಾನದ ಕಾರಣ ರದ್ದಾಗಿದೆ.
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್

ಶ್ರೀನಗರ: ಕಾರ್ಗಿಲ್ ವಿಜಯ್ ದಿನದ 22 ನೇ ವಾರ್ಷಿಕೋತ್ಸವದಂದು ಡ್ರಾಸ್‌ನಲ್ಲಿರುವ ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೇಂದ್ರಾಡಳಿತ ಪ್ರದೇಶದ ಲಡಾಕ್‌ನ ಕಾರ್ಗಿಲ್‌ಗೆ ಭೇಟಿ ನೀಡುವ ಕಾರ್ಯಕ್ರಮ ಕೊನೆ ಘಳಿಗೆಯಲ್ಲಿ ಅದೂ ಪ್ರತಿಕೂಲ ಹವಾಮಾನದ ಕಾರಣ ರದ್ದಾಗಿದೆ.

ಭಾನುವಾರ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗೆ ನಾಲ್ಕು ದಿನಗಳ ಭೇಟಿಯಲ್ಲಿ ಇಲ್ಲಿಗೆ ಆಗಮಿಸಿದ ಕೋವಿಂದ್, 1999 ರಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರ ನೆನಪಿಗಾಗಿ ನಿರ್ಮಿಸಲಾದ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಲು ಸೋಮವಾರ ಕಾರ್ಗಿಲ್‌ಗೆ ಪ್ರಯಾಣಿಸಬೇಕಿತ್ತು.

ಪಾಕಿಸ್ತಾನದ ಒಳನುಸುಳುಕೋರರು ಆಕ್ರಮಿಸಿಕೊಂಡಿದ್ದ ಎಲ್ಲಾ ಎತ್ತರಗಳನ್ನು ಪ್ರದೇಶಗಳನ್ನು ಪುನಃ ವಶಪಡಿಸಿಕೊಳ್ಳವಲ್ಲಿ ವಿಜಯ ಪತಾಕೆ ಹಾರಿಸಿದ್ದರು. 2019 ರಲ್ಲಿಯೂ ಪ್ರತಿಕೂಲ ಹವಾಮಾನದ ಕಾರಣ ಕಾರ್ಗಿಲ್‌ಗೆ ಪ್ರಯಾಣಿ ಮಾಡಲು ಸಾಧ್ಯವಾಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com