ಕಾಂಗ್ರೆಸ್ ಗೆ ಯಾವುದೇ 'ಮಿಷನ್ ಇಲ್ಲ, ಬರೀ ಕಮಿಷನ್': ಜೆಪಿ ನಡ್ಡಾ

ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು, ಕಾಂಗ್ರೆಸ್ ಗೆ "ಯಾವುದೇ ಮಿಷನ್ ಇಲ್ಲ. ಅದು ಬರೀ ಕಮಿಷನ್ ಪಕ್ಷ" ಎಂದು ಸೋಮವಾರ ಹೇಳಿದ್ದಾರೆ.
ಜೆ ಪಿ ನಡ್ಡಾ
ಜೆ ಪಿ ನಡ್ಡಾ

ನವದೆಹಲಿ: ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು, ಕಾಂಗ್ರೆಸ್ ಗೆ "ಯಾವುದೇ ಮಿಷನ್ ಇಲ್ಲ. ಅದು ಬರೀ ಕಮಿಷನ್ ಪಕ್ಷ" ಎಂದು ಸೋಮವಾರ ಹೇಳಿದ್ದಾರೆ.

22 ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿದ ನಡ್ಡಾ, ಭಾರತದ ರಕ್ಷಣಾ ಹಿತಾಸಕ್ತಿಗಳನ್ನು ರಕ್ಷಿಸಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು.

"ರಾಷ್ಟ್ರೀಯ ಹಿತಾಸಕ್ತಿಯ ಒಪ್ಪಂದಗಳ ವಿಚಾರಕ್ಕೆ ಬಂದಾಗಲೆಲ್ಲಾ, ಕಾಂಗ್ರೆಸ್ ಯಾವುದೇ ಉತ್ತಮ ಉದ್ದೇಶ ಹೊಂದಿರುವುದಿಲ್ಲ. ಕೇವಲ ಕಮಿಷನ್ ಉದ್ದೇಶ ಹೊಂದಿರುತ್ತದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ಮಿಲಿಟರಿಯ ಆಧುನೀಕರಣವು ಸ್ಥಗಿತಗೊಂಡಿತ್ತು. ಆದರೆ ಈಗ ನಾವು ಆ ದಿಕ್ಕಿನಲ್ಲಿ ಬಹಳ ವೇಗವಾಗಿ ಮುನ್ನಡೆದಿದ್ದೇವೆ" ಎಂದು ನಡ್ಡಾ ಹೇಳಿದರು.

ಪಾಕಿಸ್ತಾನ ಮೂಲದ ಭಯೋತ್ಪಾದಕರ ವಿರುದ್ಧ ವೈಮಾನಿಕ ಮತ್ತು ಸರ್ಜಿಕಲ್ ಸ್ಟೈರ್ಕ್ ನಡೆಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ "ಭಾರತ ಎಂದರೆ ಬ್ಯುಸಿನೆಸ್, ಬ್ಯುಸಿನೆಸ್, ಬ್ಯುಸಿನೆಸ್" ಎಂದು ತೋರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com