"ರೈತರ ಸಂದೇಶ ತಂದಿರುವೆ": ಸಂಸತ್ ಗೆ ಟ್ರಾಕ್ಟರ್ ನಲ್ಲಿ ಬಂದ ರಾಹುಲ್ ಗಾಂಧಿ

 ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ರಾಹುಲ್ ಗಾಂಧಿ ಜು.26 ರಂದು ಸಂಸತ್ ಗೆ ಟ್ರಾಕ್ಟರ್ ನಲ್ಲಿ ಬಂದಿದ್ದು ವಿಶೇಷವಾಗಿತ್ತು. 
ಸಂಸತ್ ಗೆ ಟ್ರಾಕ್ಟರ್ ನಲ್ಲಿ ಬಂದ ರಾಹುಲ್ ಗಾಂಧಿ
ಸಂಸತ್ ಗೆ ಟ್ರಾಕ್ಟರ್ ನಲ್ಲಿ ಬಂದ ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ರಾಹುಲ್ ಗಾಂಧಿ ಜು.26 ರಂದು ಸಂಸತ್ ಗೆ ಟ್ರಾಕ್ಟರ್ ನಲ್ಲಿ ಬಂದಿದ್ದು ವಿಶೇಷವಾಗಿತ್ತು. 

ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ರಾಹುಲ್ ಗಾಂಧಿ, "ಸಂಸತ್ ಗೆ ರೈತರ ಸಂದೇಶ ತಂದಿರುವುದಾಗಿ ಹೇಳಿದ್ದಾರೆ. 

ಸರ್ಕಾರ ರೈತರ ಧ್ವನಿಯನ್ನು ಅಡಗಿಸುತ್ತಿದೆ. ಸಂಸತ್ ನಲ್ಲಿ ರೈತರ ವಿಷಯಗಳನ್ನು ಚರ್ಚಿಸುವುದಕ್ಕೆ ಅವಕಾಶ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳು 2-3 ಉದ್ಯಮಿಗಳಿಗಾಗಿ ಎಂಬುದು ಇಡೀ ದೇಶಕ್ಕೇ ತಿಳಿದಿದೆ. ಸರ್ಕಾರ ಈ ಕಾನೂನುಗಳನ್ನು ಹಿಂಪಡೆಯಲೇಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಸರ್ಕಾರದ ಪ್ರಕಾರ ರೈತರು ಬಹಳ ಸಂತೋಷದಿಂದ ಇದ್ದಾರೆ, ಹೊರಗೆ ಕುಳಿತಿರುವವರು (ಪ್ರತಿಭಟನಾ ನಿರತ ರೈತರು) ಭಯೋತ್ಪಾದಕರು, ಆದರೆ ವಾಸ್ತವದಲ್ಲಿ ರೈತರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಕಾಂಗ್ರೆಸ್ ಸಂಸದರು ರಾಹುಲ್ ಗಾಂಧಿ ಜೊತೆಗೆ ತೆರಳಿ ಕೃಷಿ ಕಾನೂನುಗಳ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. 3 ಕೃಷಿ ಕಾನೂನುಗಳ ಜಾರಿಯನ್ನು ವಿರೋಧಿಸಿ ರೈತರು 2020 ರ ನವೆಂಬರ್ 26 ರಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಜು.25 ರಂದು ರೈತರ ಪ್ರತಿಭಟನೆ ಕುರಿತು ಮಾತನಾಡಿದ್ದ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕೃಷಿ ಕಾನೂನುಗಳ ವಿರುದ್ಧ ಸ್ವಾತಂತ್ರ್ಯ ದಿನಾಚರಣೆಯಂದು ಟ್ರ್ಯಾಕ್ಟರ್ ಪರೇಡ್ ನ್ನು ಕೈಗೊಳ್ಳುವ ರೈತರ ನಿರ್ಧಾರವನ್ನು ಸ್ವಾಗತಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com