ಬೇಡಿಕೆ ಈಡೇರುವವರೆಗೂ ಜಿಎಸ್ ಟಿ ಪಾವತಿಸದಂತೆ ವ್ಯಾಪಾರಿಗಳಿಗೆ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಕರೆ!
ತಮ್ಮ ಬೇಡಿಕೆಗಳನ್ನು ಆಡಳಿತಗಾರರು ಈಡೇರಿಸುವವರೆಗೂ ವ್ಯಾಪಾರಿಗಳು ಜಿಎಸ್‌ಟಿ ಪಾವತಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ಅಸೋಸಿಯೇಷನ್ ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ಶುಕ್ರವಾರ ಹೇಳಿದ್ದಾರೆ.
Published: 31st July 2021 12:37 AM | Last Updated: 31st July 2021 12:43 AM | A+A A-

ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ
ಥಾಣೆ: ತಮ್ಮ ಬೇಡಿಕೆಗಳನ್ನು ಆಡಳಿತಗಾರರು ಈಡೇರಿಸುವವರೆಗೂ ವ್ಯಾಪಾರಿಗಳು ಜಿಎಸ್‌ಟಿ ಪಾವತಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ಅಸೋಸಿಯೇಷನ್ ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ಶುಕ್ರವಾರ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರಕ್ಕೆ ತಮ್ಮ ಸಂದೇಶವನ್ನು ತಿಳಿಸಲು ಈ ವಿಷಯದ ಕುರಿತು ಹೋರಾಟವನ್ನು ಆರಂಭಿಸಲು ಅವರಿಗೆ ಸಲಹೆ ನೀಡಿದ್ದಾರೆ.
ವ್ಯಾಪಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮನೆ ಬಾಗಿಲಿಗೆ ಬರಲು ಹೋರಾಟ ನಡೆಸಬೇಕೆಂದು ಅವರು ಕರೆ ನೀಡಿದರು. ದೇಶಾದ್ಯಂತ 6.50 ಲಕ್ಷ ನ್ಯಾಯ ಬೆಲೆ ಅಂಗಡಿಗಳ ಮಾಲೀಕರನ್ನು ತಾನು ಪ್ರತಿನಿಧಿಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಅಧಿಕಾರಿಗಳು ಈಡೇರಿಸುವವರೆಗೂ ಜಿಎಸ್ ಟಿಯನ್ನು ವ್ಯಾಪಾರಿಗಳು ಪಾವತಿಸಬಾರದು ಎಂದರು.
ನರೇಂದ್ರ ಮೋದಿಯಾಗಲೀ ಅಥವಾ ಯಾರೇ ಆಗಲಿ, ಅವರು ನಿಮ್ಮ ಮಾತನ್ನು ಕೇಳಬೇಕು. ನಮ್ಮ ಮಾತನ್ನು ಕೇಳುವವರೆಗೂ ಜಿಎಸ್ ಟಿ ಪಾವತಿಸುವುದಿಲ್ಲ ಎಂದು ಮೊದಲು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಿರಿ, ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ, ಗುಲಾಮಗಿರಿಯಲ್ಲಿ ಇಲ್ಲ ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ನಿಂದ ತೀವ್ರ ರೀತಿಯ ಹೊಡೆತಕ್ಕೊಳಗಾಗಿರುವ ವ್ಯಾಪಾರಿಗಳನ್ನು ಪ್ರಹ್ಲಾದ್ ಮೋದಿ ಥಾಣೆಯಲ್ಲಿ ಭೇಟಿಯಾದರು. ಇ- ಕಾಮರ್ಸ್ ಪ್ಲಾಟ್ ಫಾರಂ ತೀವ್ರ ಹದೆಗೆಟ್ಟಿರುವುದರೊಂದಿಗೆ ಈ ವಲಯವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಕಾರಣಕೋವಿಡ್-19 ನಿಯಮ ಉಲ್ಲಂಘನೆಗಾಗಿ ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕಾಗಿದೆ ಎಂದು ಉಲ್ಹಾಸ್‌ನಗರ ಮತ್ತು ಅಂಬರ್ನಾಥ್‌ನ ವಿವಿಧ ವ್ಯಾಪಾರಿಗಳು ಪ್ರಹ್ಲಾದ್ ಮೋದಿಯವರಿಗೆ ತಿಳಿಸಿದರು.
ಮುಂಬೈನ ಹೊರವಲಯದಲ್ಲಿರುವ ಎರಡು ಟೌನ್‌ಶಿಪ್‌ಗಳಲ್ಲಿ ಜೀನ್ಸ್ ತೊಳೆಯುವ ಘಟಕಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವಂತೆ ಅವರು ಪ್ರಹ್ಲಾದ್ ಮೋದಿ ಅವರನ್ನು ಒತ್ತಾಯಿಸಿದರು.