ಪುಲ್ವಾಮಾದಲ್ಲಿ ಬಿಜೆಪಿ ಮುಖಂಡನಿಗೆ ಪಾಯಿಂಟ್ ಬ್ಲಾಂಕ್ ನಲ್ಲಿ ಗುಂಡಿಕ್ಕಿ ಹತ್ಯೆ!

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉಗ್ರರು ಬಿಜೆಪಿ ಮುಖಂಡರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

Published: 03rd June 2021 12:28 AM  |   Last Updated: 03rd June 2021 12:28 AM   |  A+A-


Rakesh Pandita

ರಾಕೇಶ್ ಪಂಡಿತಾ

Posted By : Vishwanath S
Source : The New Indian Express

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉಗ್ರರು ಬಿಜೆಪಿ ಮುಖಂಡರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಯೀನ್ ಪ್ರದೇಶದಲ್ಲಿ ಸಂಜೆ ಬಿಜೆಪಿ ಮುಖಂಡ ರಾಕೇಶ್ ಪಂಡಿತರನ್ನು ಉಗ್ರರು ಪಾಯಿಂಟ್-ಬ್ಲಾಂಕ್ ನಲ್ಲಿ ಗುಂಡು ಹಾರಿಸಿ ಕೊಂದಿದ್ದಾರೆ. ಅಲ್ಲದೆ ಉಗ್ರರ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರೂ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತ್ ಮತ್ತು ಟ್ರಾಲ್ ಮುನ್ಸಿಪಲ್ ಕಮಿಟಿಯ ಕೌನ್ಸಿಲರ್ ಆಗಿರುವ ಪಂಡಿತ್ ಮೇಲೆ ಉಗ್ರರ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಪಂಡಿತ್ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಇನ್ನು ಗಾಯಗೊಂಡ ಮಹಿಳೆಯನ್ನು ಪಂಡಿತಾಳ ಸ್ನೇಹಿತನ ಮಗಳು ಎಂದು ಹೇಳಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಉಗ್ರರ ದಾಳಿ ನಡೆದ ಕೂಡಲೇ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆ ಪ್ರದೇಶಕ್ಕೆ ಧಾವಿಸಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಮೂವರು ಉಗ್ರರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಅವರ ಗುರುತು ಪತ್ತೆಯಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ನೀಡಿದ್ದ ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು ಬಿಟ್ಟು ಟ್ರಾಲ್ ಗೆ ಭೇಟಿ ನೀಡಿದ್ದು ಅವರ ಸಾವಿಗೆ ಕಾರಣವಾಗಿದೆ. ಇನ್ನು ಉಗ್ರದಾಳಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.  


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp