ಸ್ವದೇಶಿ ಕೋವಿಡ್ ಲಸಿಕೆಗೆ ಬಯಲಾಜಿಕಲ್-ಇ ಜೊತೆ ಕೇಂದ್ರ ಸರ್ಕಾರ ಒಪ್ಪಂದ: 30 ಕೋಟಿ ಡೋಸ್ ಮುಂಗಡ ಬುಕ್ಕಿಂಗ್ 

ಹೈದರಾಬಾದ್ ಮೂಲದ ಲಸಿಕೆ ಉತ್ಪಾದಕ ಕಂಪೆನಿ ಬಯೊಲಾಜಿಕಲ್-ಇ ಜೊತೆ 30 ಕೋಟಿ ಕೋವಿಡ್ ಲಸಿಕೆ ಡೋಸ್ ನ್ನು ಕಾಯ್ದಿರಿಸಲು ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕಾಗಿ 1500 ಕೋಟಿ ರೂಪಾಯಿ ಅಡ್ವಾನ್ಸ್ ಹಣ ನೀಡಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹೈದರಾಬಾದ್ ಮೂಲದ ಲಸಿಕೆ ಉತ್ಪಾದಕ ಕಂಪೆನಿ ಬಯೊಲಾಜಿಕಲ್-ಇ ಜೊತೆ 30 ಕೋಟಿ ಕೋವಿಡ್ ಲಸಿಕೆ ಡೋಸ್ ನ್ನು ಕಾಯ್ದಿರಿಸಲು ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕಾಗಿ 1500 ಕೋಟಿ ರೂಪಾಯಿ ಅಡ್ವಾನ್ಸ್ ಹಣ ನೀಡಲಿದೆ.

ಈ ಲಸಿಕೆ ಡೋಸ್ ಗಳನ್ನು ಬಯೊಲಾಜಿಕಲ್ -ಇ ಕಂಪೆನಿ ಆಗಸ್ಟ್ ನಿಂದ ಡಿಸೆಂಬರ್ ಒಳಗೆ ತಯಾರಿಸಿ ಸಂಗ್ರಹಿಸಲಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಬಯಾಲಜಿಕಲ್ -ಇ ತಯಾರಿಸುತ್ತಿರುವ ಕೋವಿಡ್-19 ಲಸಿಕೆ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದು ಈ ಹಿಂದೆ ಮೊದಲ ಮತ್ತು ಎರಡನೇ ಹಂತದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ. ಬಯಾಲಜಿಕಲ್ -ಇ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಆರ್ ಬಿಡಿ ಪ್ರೊಟೀನ್ ಆಧಾರಿತ ಉಪ ಘಟಕ ಲಸಿಕೆಯಾಗಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಜನತೆಗೆ ಲಭ್ಯವಾಗಲಿದೆ.

ಕೋವಿಡ್-19 ಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಸರಿಯಾದ ಪರಿಶ್ರಮದ ನಂತರ ಬಯಾಲಜಿಕಲ್-ಇ ಪ್ರಸ್ತಾಪವನ್ನು ಪರೀಕ್ಷಿಸಿ ಅನುಮೋದನೆಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com