5ಜಿ ತಂತ್ರಜ್ಞಾನ ವಿರೋಧಿಸಿದ್ದ ನಟಿ ಜೂಹಿ ಚಾವ್ಲಾಗೆ ದೆಹಲಿ ಹೈಕೋರ್ಟ್ 20 ಲಕ್ಷ ರೂ. ದಂಡ!; ಇಷ್ಟಕ್ಕೂ ನಟಿ ಅರ್ಜಿಯಲ್ಲೇನಿತ್ತು?

ಭಾರತದಲ್ಲಿ 5G ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ಕಾನೂನು ವ್ಯಾಜ್ಯ ಹೂಡಿದ್ದ ಖ್ಯಾತ ನಟಿ ಜೂಹಿ ಚಾವ್ಲಾ ಅವರಿಗೆ ತೀವ್ರ ಮುಖಭಂಗವಾಗಿದ್ದು, ಅರ್ಜಿಯನ್ನು ಪ್ರಚಾರದ ತಂತ್ರ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು ಮಾತ್ರವಲ್ಲದೇ 20 ಲಕ್ಷ ರೂ ದಂಡ ವಿಧಿಸಿದೆ.
ನಟಿ ಜೂಹಿ ಚಾವ್ಲಾ
ನಟಿ ಜೂಹಿ ಚಾವ್ಲಾ

ನವದೆಹಲಿ: ಭಾರತದಲ್ಲಿ 5G ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ಕಾನೂನು ವ್ಯಾಜ್ಯ ಹೂಡಿದ್ದ ಖ್ಯಾತ ನಟಿ ಜೂಹಿ ಚಾವ್ಲಾ ಅವರಿಗೆ ತೀವ್ರ ಮುಖಭಂಗವಾಗಿದ್ದು, ಅರ್ಜಿಯನ್ನು ಪ್ರಚಾರದ ತಂತ್ರ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು ಮಾತ್ರವಲ್ಲದೇ 20 ಲಕ್ಷ ರೂ ದಂಡ ವಿಧಿಸಿದೆ.

ಇಂದು ಅರ್ಜಿಯ ಮುಂದುವರೆದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, 5ಜಿ ತಂತ್ರಜ್ಞಾನದ ಕುರಿತಂತೆ ಜೂಹಿ ಚಾವ್ಲಾ ಅವರು ಸಲ್ಲಿಕೆ ಮಾಡಿರುವ ಅರ್ಜಿಪ್ರಚಾರದ ತಂತ್ರಗಾರಿಕೆಯಾಗಿದೆ. ಅರ್ಜಿದಾರರು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಅವರಿಗೆ 20 ಲಕ್ಷ ರೂ ದಂಡ ವಿಧಿಸಿರುವುದಾಗಿ ಹೇಳಿದೆ. 

ಜೂಹಿ ಚಾವ್ಲಾ ಅವರು ಪ್ರಕರಣದ ವಿಚಾರಣೆಯ ವರ್ಚುವಲ್ ಲಿಂಕ್ ಅನ್ನು ಮೂರು ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಈ ಅರ್ಜಿ ಕೇವಲ ಪ್ರಚಾರ ತಂತ್ರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಹಾಡು ಹಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿ
ಇನ್ನು ಇದೇ ವೇಳೆ ಈ ಹಿಂದಿನ ವಿಚಾರಣೆಯಲ್ಲಿ ಹಾಡು ಹಾಡಿದ್ದ ಜೂಹಿ ಚಾವ್ಲಾ ಅವರ ಅಭಿಮಾನಿಯ ವಿರುದ್ಧ ಕೆಂಡಾಮಂಡಲವಾದ ಪೀಠ ದೆಹಲಿ ಪೊಲೀಸರು ಆದಷ್ಟು ಬೇಗ ವಿಚಾರಣೆ ವೇಳೆ ಹಾಡು ಹಾಡಿ ನ್ಯಾಯಾಲಯದ ಕಲಾಪಕ್ಕೆ ಅಡ್ಡಿ ಪಡಿಸಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಬೇಕು. ಆತನ ವಿರುದ್ಧ ಸೂಕ್ತ  ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಜೂಹಿ ಚಾವ್ಲಾ ಅರ್ಜಿಯಲ್ಲೇನಿತ್ತು?
ಭಾರತದಲ್ಲಿ 5G ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ಅರ್ಜಿ ಹೂಡಿದ್ದ ನಟಿ ಜೂಹಿ ಚಾವ್ಲಾ ಅವರು, 5ಜಿ ತಂತ್ರಜ್ಞಾನದಿಂದಾಗಿ ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್​ ಇಂದು ಇರುವುದಕ್ಕಿಂತಲೂ 10 ರಿಂದ 100 ಪಟ್ಟು ಹೆಚ್ಚಿರುತ್ತದೆ. ಮನುಷ್ಯರಿಗೆ ಮತ್ತು ಎಲ್ಲ ಜೀವಿಗಳಿಗೆ ಸುರಕ್ಷಿತವಲ್ಲ. 5ಜಿ  ತಂತ್ರಜ್ಞಾನದಿಂದಾಗಿ ಇವತ್ತಿಗೆ ಹೊರಸೂಸುತ್ತಿರುವ ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್​ 10 ರಿಂದ 100 ಪಟ್ಟು ಹೆಚ್ಚಾಗುವುದರಿಂದ ವರ್ಷದ 365 ದಿನ 24 ಗಂಟೆ ಕಾಲ ಭೂಮಿ ಮೇಲಿನ ಯಾವುದೇ ವ್ಯಕ್ತಿ, ಯಾವುದೇ ಪ್ರಾಣಿ, ಯಾವುದೇ ಪಕ್ಷಿ, ಕೀಟ ಮತ್ತು ಸಸ್ಯ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.  

ಮನುಷ್ಯರು ಹಾಗೂ ಭೂಮಿಯ ಪರಿಸರದ ಮೇಲೆ ಸರಿಪಡಿಸಲಾದ ಹಾನಿಯಾಗುತ್ತದೆ. ಅದೇ ರೀತಿ 5G ತಂತ್ರಜ್ಞಾನದಿಂದ ಮನುಷ್ಯರ ಮೇಲೆ ಗಂಭೀರ ಮೇಲೆ ಪರಿಣಾಮ ಆಗುತ್ತದೆ. ಅಸ್ವಸ್ಥತೆಗೆ ಗುರಿಯಾದ ಒಳಗಾದ ಮನುಷ್ಯರು ಮತ್ತು ಡಿಎನ್​ಎ, ಜೀವಕೋಶಗಳು, ಅಂಗಾಂಗ ವ್ಯವಸ್ಥೆಗೆ ಹಾನಿ ಮಾಡಿರುವುದು  ಕ್ಲಿನಿಕಲ್ ಪರೀಕ್ಷೆಯಲ್ಲಿ ಕಂಡುಬಂದಿದೆ. ಇದರ ಜತೆಗೆ ಪ್ರಾಣಿಗಳು ಮತ್ತು ಸಸ್ಯಗಳ ಮೇಲೂ ಪರಿಣಾಮ ಆಗುತ್ತದೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಮಾಲಿನ್ಯದಿಂದ ಆಧುನಿಕ ನಾಗರಿಕತೆ ಜನರಲ್ಲಿ ಕ್ಯಾನ್ಸರ್, ಹೃದಯಕ್ಕೆ ಸಂಬಂಧಿಸಿ ಸಮಸ್ಯೆ ಎದುರಾಗಬಹುದು ಎಂಬುದು 10,000ಕ್ಕೂ ಹೆಚ್ಚು ಅಧ್ಯಯನಗಳಿಂದ ಗೊತ್ತಾಗಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com