ಬ್ಲೂ ಟಿಕ್ ಗಾಗಿ ಮೋದಿ ಸರ್ಕಾರ ಹೋರಾಟ: ಟ್ವಿಟರ್ ವಿವಾದ ಕುರಿತು ರಾಹುಲ್ ಹೇಳಿಕೆ!

ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೋದಿ ಸರ್ಕಾರ ಬ್ಲೂ ಟಿಕ್ ವೊಂದಕ್ಕಾಗಿ ಹೋರಾಟ ಮಾಡುತ್ತಿದೆ. ಕೋವಿಡ್ ಲಸಿಕೆ ಪಡೆಯಲು ಬಯಸುವ ಜನರು ಸ್ವಾವಲಂಬಿಯಾಗಬೇಕಾದ ಅಗತ್ಯವಿದೆ ಎಂದಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ:  ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೋದಿ ಸರ್ಕಾರ ಬ್ಲೂ ಟಿಕ್ ವೊಂದಕ್ಕಾಗಿ ಹೋರಾಟ ಮಾಡುತ್ತಿದೆ. ಕೋವಿಡ್ ಲಸಿಕೆ ಪಡೆಯಲು ಬಯಸುವ ಜನರು ಸ್ವಾವಲಂಬಿಯಾಗಬೇಕಾದ ಅಗತ್ಯವಿದೆ ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉನ್ನತ ಪದಾಧಿಕಾರಿ ಮೋಹನ್ ಭಾಗವತ್ ಸೇರಿದಂತೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ಬ್ಲೂ ಟಿಕ್  ಬ್ಯಾಡ್ಜ್ ನ್ನು ಟ್ವಿಟರ್ ತೆಗೆದ ನಂತರ ಸಾಕಷ್ಟು ವಿವಾದವಾಗಿ ತದನಂತರ ಮರುಸ್ಥಾಪಿಸಲಾಗಿತ್ತು. ಇದು ನಡೆದ ಮಾರನೇ ದಿನ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ನಿಯಮಗಳ ಪ್ರಕಾರ, ಆರು ತಿಂಗಳಿನಿಂದ ನಿಷ್ಕ್ರಿಯವಾಗಿದ್ದರೆ ಅಥವಾ ಅಪೂರ್ಣವಾಗಿದ್ದರೆ ಬ್ಲೂ ಬ್ಯಾಡ್ಜ್ ಮತ್ತು ಪರಿಶೀಲಿಸಿದ ಸ್ಥಿತಿಯನ್ನು ಖಾತೆಯಿಂದ ಸ್ವಯಂ ಚಾಲಿತವಾಗಿ ತೆಗೆದುಹಾಕಬಹುದು ಎಂದು ಟ್ವಿಟರ್ ಹೇಳಿತ್ತು.

ಮೋದಿ ಸರ್ಕಾರ ಬ್ಲೂ ಟಿಕ್ ಗಾಗಿ ಹೋರಾಡುತ್ತಿದೆ. ನೀವು ಕೋವಿಡ್ ಲಸಿಕೆ ಬಯಸಿದರೆ, ನಂತರ ಸ್ವಾವಲಂಬಿಗಳಾಗಿರಿ ಎಂದು ಆದ್ಯತೆ ಹ್ಯಾಷ್ ಟಾಗ್ ಬಳಸಿ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವಿಟ್ ಮಾಡಿದ್ದಾರೆ.

ಮತ್ತೊಂದು ಟ್ವಿಟ್ ನಲ್ಲಿ  ಮಲಯಾಳಂ ಭಾಷೆಯಲ್ಲಿ ನರ್ಸ್ ಗಳು ಮಾತನಾಡುವಂತಿಲ್ಲ ದೆಹಲಿ ಸರ್ಕಾರದ ಆಸ್ಪತ್ರೆಗಳು ಆದೇಶ ನೀಡಿದ ನಂತರ ಭಾಷೆ ತಾರತಮ್ಯ ನಿಲ್ಲಿಸುವಂತೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಮಲಯಾಳಂ ದೇಶದ ಇತರ ಭಾಷೆಗಳಂತೆ ಭಾರತೀಯ ಭಾಷೆ. ಭಾಷೆ ತಾರತಮ್ಯವನ್ನು ನಿಲ್ಲಿಸಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com