ದೇಶಾದ್ಯಂತ ಬ್ಲಾಕ್ ಫಂಗಸ್ ಸೋಂಕು ಪ್ರಕರಣಗಳ ಸಂಖ್ಯೆ 28,252ಕ್ಕೆ ಏರಿಕೆ: ಕೇಂದ್ರ ಸರ್ಕಾರ

ಕೋವಿಡ್-19 ಸಾಂಕ್ರಾಮಿಕ ಬೆನ್ನಲ್ಲೇ ಭೀತಿ ಸೃಷ್ಟಿಸಿರುವ ಬ್ಲಾಕ್ ಫಂಗಸ್ ನ ಸೋಂಕಿತರ ಸಂಖ್ಯೆ ಇದೀಗ 28,252ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಪ್ಪು ಶಿಲೀಂಧ್ರ
ಕಪ್ಪು ಶಿಲೀಂಧ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಬೆನ್ನಲ್ಲೇ ಭೀತಿ ಸೃಷ್ಟಿಸಿರುವ ಬ್ಲಾಕ್ ಫಂಗಸ್ ನ ಸೋಂಕಿತರ ಸಂಖ್ಯೆ ಇದೀಗ 28,252ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು, ದೇಶದ ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಈ ವರೆಗೂ 28,252 ಬ್ಲಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 86 ಪ್ರಕರಣಗಳು ಕೋವಿಡ್-19  ಮತ್ತು ಶೇ.62.3ರಷ್ಟು ಮಧುಮೇಹ ಇತಿಹಾಸವನ್ನು ಹೊಂದಿರುವ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚಿನ ಬ್ಲಾಕ್ ಫಂಗಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನದಲ್ಲಿ ಗುಜರಾತ್ ಇದೆ. ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ 6,339ಕ್ಕೆ ಏರಿಕೆಯಾಗಿದ್ದು, ಗುಜರಾತ್ ನಲ್ಲಿ 5,486ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. 

ಇದೇ ವೇಳೆ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿಕೆ ಪಾಲ್ ಅವರು, ದೇಶದ ಲಸಿಕಾ ಕಾರ್ಯಕ್ರಮ. ಮಕ್ಕಳ ಕೋವಿಡ್-19 ಆರೈಕೆಯ ಸಿದ್ಧತೆ ಮತ್ತು ಸಾಂಕ್ರಾಮಿಕದ ಮೂರನೇ ಅಲೆಯನ್ನು ನಿಯಂತ್ರಿಸುವ ಮುಂದಿನ ಮಾರ್ಗದ ಸಂಕ್ಷಿಪ್ತ ವಿವರ ನೀಡಿದರು.  ಇನ್ನು ದೇಶದ ಕೋವಿಡ್ ಸೋಂಕಿತರ  ಒಟ್ಟಾರೆ ಸಂಖ್ಯೆ 23 ಕೋಟಿಗೇರಿದ್ದು, ಇದಕ್ಕಾಗಿ 141 ದಿನಗಳು ತಗುಲಿದೆ. ಅಮೆರಿಕದಲ್ಲಿ ಇದೇ ಸಂಖ್ಯೆಗೆ 134 ದಿನಗಳು ತಗುಲಿದ್ದು, ಜಾಗತಿಕವಾಗಿ ಕೊರೋನಾ ಸೋಂಕಿಗೆ ಭೀಕರವಾಗಿ ತುತ್ತಾದ ದೇಶಗಳ ಪಟ್ಟಿಯಲ್ಲಿ ಭಾರತ ಇದೀಗ ಎರಡನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿ ಭಾರತವಿದೆ.

ಅತೀ ವೇಗವಾಗಿ ಲಸಿಕೆ ವಿತರಣೆ
ಇನ್ನು ದೇಶದಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ಕೂಡ ಇತರೆ ದೇಶಗಳಿಗೆಳಿಗೆ ಹೋಲಿಕೆ ಮಾಡಿದರೆ ವೇಗದಿಂದೂ ಕೂಡಿದ್ದು, ಜಗತ್ತಿನಾದ್ಯಂತ 88.7 ಕೋಟಿ ಜನರಿಗೆ ಕನಿಷ್ಠ ಮೊದಲ ಡೋಸ್ ನೀಡಲಾಗಿದ್ದು, ಈ ಪೈಕಿ ಭಾರತವೊಂದರಲ್ಲೇ 17.9 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಇದು  ಜಾಗತಿಕ ವ್ಯಾಪ್ತಿಯ ಶೇ 20.2 ರಷ್ಟು ಎಂದು ಪಾಲ್ ಹೇಳಿದ್ದಾರೆ.

ಮೂರನೇ ಅಲೆಗೆ ಸಿದ್ಧತೆ
ಕೊರೋನಾ ಸಾಂಕ್ರಾಮಿಕದ ಸಂಭಾವ್ಯ ಮೂರನೇ ಅಲೆಗೆ ಸಿದ್ಧತೆ ನಡೆಸಲಾಗಿದ್ದು, ಈಗಾಗಲೇ ಸಿದ್ಧತೆಗಳು ಬಹುತೇಕ ಪೂರ್ಣವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಮತ್ತು ಕೋವಿಡ್ ಕೇರ್ ಕೇಂದ್ರಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಮಕ್ಕಳಿಗಾಗಿಯೇ ಹಲವು ರಾಜ್ಯಗಳು ವಿಶೇಷ ಕೋವಿಡ್ ಕೇರ್  ಕೇಂದ್ರಗಳ ಯೋಜನೆ ರೂಪಿಸಿವೆ ಎಂದು ಪಾಲ್ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com