6 ತಿಂಗಳಿನಿಂದ ಜೊತೆಯಲ್ಲಿಲ್ಲ.. ಆ ಮಗು ನನ್ನದಲ್ಲ: ಟಿಎಂಸಿ ಸಂಸದೆ ನುಸ್ರತ್ ಜಹಾನ್ ಪತಿ ನಿಖಿಲ್ ಜೈನ್ ಹೇಳಿಕೆ

ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ರ ವೈವಾಹಿಕ ಜೀವನದಲ್ಲಿನ ಬಿರುಕು ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮದುವೆ ನೋಂದಣಿ ಮಾಡಿಸೋಣ ಎಂದು ಹೇಳಿದ್ದೆ.. ಆದರೆ ನುಸ್ರತ್ ಜಹಾನ್ ನಿರ್ಲಕ್ಷಿಸಿದರು ಎಂದು ನಿಖಿಲ್ ಜೈನ್ ಹೇಳಿದ್ದಾರೆ.

Published: 10th June 2021 10:18 PM  |   Last Updated: 11th June 2021 12:25 PM   |  A+A-


Nusrat jahan-Nikhil Jain

ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್

Posted By : Srinivasamurthy VN
Source : PTI

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ರ ವೈವಾಹಿಕ ಜೀವನದಲ್ಲಿನ ಬಿರುಕು ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮದುವೆ ನೋಂದಣಿ ಮಾಡಿಸೋಣ ಎಂದು ಹೇಳಿದ್ದೆ.. ಆದರೆ ನುಸ್ರತ್ ಜಹಾನ್ ನಿರ್ಲಕ್ಷಿಸಿದರು. ಅಲ್ಲದೆ ನಾವು 6 ತಿಂಗಳನಿಂದ  ಜೊತೆಯಲ್ಲಿಲ್ಲ.. ಆ ಮಗು ನನ್ನದಲ್ಲ ಎಂದು ನಿಖಿಲ್ ಜೈನ್ ಹೇಳಿದ್ದಾರೆ.

ತಮ್ಮ ವಿವಾಹ ಮಾನ್ಯತೆ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿಕೆ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಿರುವ ಪತಿ ನಿಖಿಲ್ ಜೈನ್, ಮದುವೆ ನೋಂದಣಿ ಮಾಡಿಸೋಣ ಎಂದು ಸಾಕಷ್ಟು ಬಾರಿ ಹೇಳಿದ್ದೆ. ಆದರೆ ನುಸ್ರತ್ ಜಹಾನ್ ಬೇಕೆಂದೇ ಅದನ್ನು ನಿರ್ಲಕ್ಷಿಸಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಖಿಲ್ ಜೈನ್ ರೊಂದಿಗಿನ ಮದುವೆ ಕಾನೂನಾತ್ಮಕವಲ್ಲ, ಹೀಗಾಗಿ ವಿಚ್ಛೇದನ ಪ್ರಶ್ನೆ ಉದ್ಭವಿಸುವುದಿಲ್ಲ: ಟಿಎಂಸಿ ಸಂಸದೆ ನುಸ್ರತ್ ಜಹಾನ್

'ಪ್ರೀತಿಯಿಂದ, ನಾನು ನುಸ್ರತ್ಳನ್ನು ಮದುವೆಯಾಗಲು ಪ್ರಸ್ತಾಪಿಸಿದೆ, ಅದನ್ನು ಅವಳು ಸಂತೋಷದಿಂದ ಒಪ್ಪಿಕೊಂಡಳು. ನಾವು 2019ರ ಜೂನ್ ನಲ್ಲಿ ಟರ್ಕಿಯ ಬೊಡ್ರಮ್ ನಲ್ಲಿ ವಿವಾಹವಾದೆವು. ಬಳಿಕ ಕೋಲ್ಕತಾಗೆ ಬಂದು ರಿಸೆಪ್ಷನ್ ನೀಡಿದೆವು. ನಾವು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದೆವು  ಮತ್ತು ಸಮಾಜದಲ್ಲಿ ನಮ್ಮನ್ನು ವಿವಾಹಿತ ದಂಪತಿಗಳೆಂದು ಪರಿಚಯಿಸಿಕೊಂಡಿದ್ದೇವೆ. ನಾವು ಒಟ್ಟಿಗೆ ಇದ್ದ ಸಮಯದಲ್ಲಿ, ಮದುವೆಯನ್ನು ನೋಂದಾಯಿಸಲು ನಾನು ಹಲವಾರು ಸಂದರ್ಭಗಳಲ್ಲಿ ನುಸ್ರತ್ ಳನ್ನು ವಿನಂತಿಸಿದೆ ಆದರೆ ಆಕೆ ನನ್ನ ಮಾತಿಗೆ ಬೆಲೆ ನೀಡಲೇ ಇಲ್ಲ. 2020 ರ ಆಗಸ್ಟ್‌ನಿಂದ, ಸಿನಿಮಾ  ಚಿತ್ರೀಕರಣದ ಸಮಯದಲ್ಲಿ, ಆಕೆಯ ವರ್ತನೆ ಬದಲಾಯಿತು. ಹೀಗಾಗಿ ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ ಕಳೆದ ವರ್ಷ ನವೆಂಬರ್‌ನಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದೆವು ಎಂದು ನಿಖಿಲ್ ಹೇಳಿದ್ದಾರೆ. 

ನುಸ್ರತ್ ಗರ್ಭಿಣಿ ಊಹಾಪೋಹ; ಮಗು ನನ್ನದಲ್ಲ ಎಂದ ನಿಖಿಲ್ ಜೈನ್
ಇದೇ ವೇಳೆ ನುಸ್ರತ್ ಜಹಾನ್ ಗರ್ಭಿಣಿ ಎಂಬ ಊಹಾಪೋಹಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದಿ ನಿಖಿಲ್ ಜೈನ್ ಕಳೆದ 6 ತಿಂಗಳಿನಿಂದ ನಾವು ಒಟ್ಟಿಗೆ ಇಲ್ಲ. ಒಂದು ವೇಳೆ ನುಸ್ರತ್ ಗರ್ಭಿಣಿಯಾಗಿದ್ದರೆ ಆ ಮಗು ನನ್ನದಲ್ಲ ಎಂದು ನಿಖಿಲ್ ಜೈನ್ ಹೇಳಿದ್ದಾರೆ.

ನಟನೊಂದಿಗೆ ನುಸ್ರತ್ ಹೆಸರು ತಳುಕು
ಇದೇ ವೇಳೆ ನುಸ್ತರ್ ಜಹಾನ್ ಅವರ ಹೆಸರು ಬಂಗಾಳೀ ನಟ ಯಶ್‌ ದಾಸ್‌ಗುಪ್ತಾ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದು, ಇಬ್ಬರ ನಡುವೆ ಗಾಢ ಸ್ನೇಹವಿದೆ. ಇಬ್ಬರೂ ಈ ಹಿಂದೆ ರಾಜಸ್ಥಾನಕ್ಕೆ ಟ್ರಿಪ್‌ ಕೂಡಾ ಹೋಗಿದ್ದರು ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ನಟ ಯಶ್ ದಾಸ್ ಗುಪ್ತಾ ಸ್ಪಷ್ಟನೆ ನೀಡಿದ್ದು, ನನಗೆ ನುಸ್ರತ್‌ರವರ ವೈವಾಹಿಕ ಬದುಕು, ಸಮಸ್ಯೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಪ್ರತಿ ವರ್ಷ ಟ್ರಿಪ್ ಕೈಗೊಳ್ಳುತ್ತೇನೆ. ಈ ಬಾರಿ ರಾಜಸ್ಥಾನಕ್ಕೆ ತೆರಳಿದ್ದೆ ಈ ಟ್ರಿಪ್‌ಗೆ ನನ್ನೊಂದಿಗೆ ಯಾರು ಬೇಕಾದರೂ ಬರಬಹುದು ಎಂದು ಹೇಳಿದ್ದಾರೆ.

ಇನ್ನು ನುಸ್ರತ್ ಮತ್ತು ನಟ ಯಶ್ ದಾಸ್ ಗುಪ್ತಾ ಎಸ್ಒಎಸ್ ಕೋಲ್ಕತಾ ಎಂಬ ಸಿನಿಮಾದಲ್ಲಿ ಒಟ್ಟಿಗೇ ನಟಿಸಿದ್ದಾರೆ.

ಯಾರು ಈ ಯಶ್ ದಾಸ್ ಗುಪ್ತಾ?
1985ರ ಅಕ್ಟೋಬರ್ 10 ರಂದು ಜನಿಸಿದ ಯಶ್‌ ನ್ಯಾಷನಲ್ ಟಿವಿ ಮೂಲಕ ವೃತ್ತಿ ಬದುಕು ಆರಂಭಿಸಿದ್ದರು. ಅನೇಕ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಅನೇಕ ಬೆಂಗಾಲಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಯಶ್‌ ದಾಸ್‌ಗುಪ್ತಾ 2020 ರಲ್ಲಿ ನಡೆದಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಅದೃಷ್ಟ ಕೈಹಿಡಿದಿರಲಿಲ್ಲ, ಸೋಲುಂಡಿದ್ದರು.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp