ವಂಡಲೂರು ಮೃಗಾಲಯದಲ್ಲಿನ ಕೋವಿಡ್-19 ಪಾಸಿಟಿವ್ ಸಿಂಹಗಳಲ್ಲಿ ಈಗ 'ಡಿಸ್ಟೆಂಪರ್ ವೈರಸ್' ದೃಢ!
ಚೆನ್ನೈ: ಕೋವಿಡ್ ತೊಂದರೆಗಳು ಸಾಕಾಗುವುದಿಲ್ಲ ಎಂಬಂತೆ, ಚೆನ್ನೈನ ಪ್ರಸಿದ್ಧ ಅರಿಗ್ನಾರ್ ಪ್ರಾಣಿ ಸಂಗ್ರಹಾಲಯದಲ್ಲಿ (ವಂಡಲೂರು ಪ್ರಾಣಿ ಸಂಗ್ರಹಾಲಯ) ಕೋವಿಡ್-19 ಸೋಂಕಿತ ಸಿಂಹಗಳಲ್ಲಿ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಡಿಸ್ಟೆಂಪರ್ ವೈರಸ್ ದೃಢಪಟ್ಟಿದೆ.
ಏಳು ಮಾದರಿಗಳನ್ನು (ನಾಲ್ಕು ಹುಲಿ ಮತ್ತು ಮೂರು ಸಿಂಹಗಳು) ಉತ್ತರ ಪ್ರದೇಶದ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು. ಈ ಪೈಕಿ ಒಂದು ಸಿಂಹಿಣಿಗೆ ಸಾರ್ಸ್ ಕೋವ್-2 ಮತ್ತು ಡಿಸ್ಪೆಂಪರ್ ವೈರಸ್ ನಿಂದ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
ಮತ್ತೊಂದು ಸಿಂಹಿಣಿಯಲ್ಲಿ ಸಾರ್ಸ್ ಕೋವ್-2 ಮತ್ತು ಒಂದು ಸಿಂಹದಲ್ಲಿ ಡಿಸ್ಟೆಂಪರ್ ವೈರಸ್ ಪತ್ತೆಯಾಗಿರುವುದಾಗಿ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕ ಕೆ. ಪಿ. ಸಿಂಗ್ ತಿಳಿಸಿದ್ದಾರೆ. ಆದರೆ, ನಾಲ್ಕು ಹುಲಿಗಳ ಮಾದರಿಗಳಲ್ಲಿ ಎರಡು ವೈರಸ್ ಗಳ ನೆಗೆಟಿವ್ ವರದಿ ಬಂದಿದೆ.
ಈವರೆಗೂ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹುಲಿಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಆದರೆ, ಸಿಂಹಗಳ ಮಾದರಿ ವರದಿಯನ್ನು ಇನ್ನೂ ಕಾಯಲಾಗುತ್ತಿದೆ ಎಂದು ವಂಡಲೂರು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ