ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಶಶಿಕಲಾರ ಮತ್ತೊಂದು ಆಡಿಯೋ ಬಿಡುಗಡೆ!

ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ

Published: 10th June 2021 09:09 PM  |   Last Updated: 10th June 2021 09:13 PM   |  A+A-


Shashikala1

ಶಶಿಕಲಾ

Posted By : Nagaraja AB
Source : The New Indian Express

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ವಿ.ಕೆ.ಶಶಿಕಲಾ ಪ್ರತಿದಿನ ಮಾತನಾಡುತ್ತಿರುವ ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಧ್ಯೆ ನಡೆಯುತ್ತಿರುವ ಸಭೆ ಮಹತ್ವ ಪಡೆದುಕೊಂಡಿದ್ದು, ಅವರು ಶೀಘ್ರ ರಾಜಕೀಯಕ್ಕೆ ಮರಳಲಿದ್ದಾರೆ ಎಂಬ ಭರವಸೆಯನ್ನು ಕಾರ್ಯಕರ್ತರಲ್ಲಿ ಮೂಡಿಸಿದೆ.

ಶಶಿಕಲಾ ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿರುವ ಮತ್ತೊಂದು ಆಡಿಯೋ ರೆಕಾರ್ಡಿಂಗ್ ಗುರುವಾರ ಬಿಡುಗಡೆಯಾಗಿದೆ. ಅದರಲ್ಲಿ ಎಐಎಡಿಎಂಕೆ ತನ್ನಿಂದ ಬೇರೆಯಾಗಲ್ಲ ಎಂದು ಹೇಳಿದ್ದಾರೆ. ಇಂದಿನ ಆಡಿಯೊದಲ್ಲಿ, ಮೊದಲ ಬಾರಿಗೆ ಶಶಿಕಲಾ ಎಐಎಡಿಎಂಕೆ ಎಂದು ಸ್ಪಷ್ಟವಾಗಿ ಹೆಸರಿಸಿದ್ದರೆ, ಹಿಂದಿನ ಆಡಿಯೋಗಳಲ್ಲಿ  ಅವರು ಅದನ್ನು 'ಕಚ್ಚಿ' (ಪಕ್ಷ) ಎಂದು ಉಲ್ಲೇಖಿಸಿದ್ದರು. 

ಇದಕ್ಕೂ ಮುನ್ನ ಎಐಎಡಿಎಂಕೆ ಮುಖಂಡ ಎಡಪ್ಪಾಡಿ ಕೆ ಪಳನಿಸ್ವಾಮಿ, ಟಿಟಿವಿ ದಿನಕರ್ ನಡೆಸುತ್ತಿರುವ ಎಎಂಎಂಕೆ ಪಕ್ಷಕ್ಕೆ ಮರಳುವುದಾಗಿ ಶಶಿಕಲಾ ಹೇಳುತ್ತಿರಬಹುದೆಂದು ಈ ವಿಷಯವನ್ನು ಬದಿಗಿಟ್ಟಿದ್ದರು. ಈ ಮಧ್ಯೆ ಒ. ಪಳನಿಸ್ವಾಮಿ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಬೆಂಬಲಿಗರ ನಡುವಣ ಫೋಸ್ಟರ್ ವಾರ್ ತಿರುನೆಲ್ವೇಲಿ ಜಿಲ್ಲೆಯಲ್ಲಿ ಮುಂದುವರೆದಿದೆ. ಗುರುವಾರ, ಪನ್ನೀರ್‌ಸೆಲ್ವಂ ಬೆಂಬಲಿಸುವ ಪೋಸ್ಟರ್‌ಗಳಿಗೆ ಪ್ರತಿಕ್ರಿಯೆಯಾಗಿ, ಪಳನಿಸ್ವಾಮಿ ಬೆಂಬಲಿಗರು ಪ್ರತಿಪಕ್ಷದ ನಾಯಕರಾಗಿ ಅವರ ಚುನಾವಣೆಯನ್ನು ಶ್ಲಾಘಿಸುವ ಪೋಸ್ಟರ್‌ಗಳನ್ನು ಸಹ ಹಾಕಿದರು.

ಆದಾಗ್ಯೂ, ಪಳನಿಸ್ವಾಮಿ ತಿಂಗಳ ಹಿಂದಷ್ಟೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು, ಉಪ ನಾಯಕ ಮತ್ತು ವಿಪ್ ಸ್ಥಾನಕ್ಕೆ ಚುನಾವಣೆ ವಿಳಂಬವಾಗುತ್ತಿದೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನಡುವಣ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ತಮಿಳುನಾಡು ವಿಧಾನಸಭೆಯ ಪ್ರಮುಖ ಸ್ಥಾನಗಳಲ್ಲಿ ವಿಪ್ ಕೂಡಾ ಒಂದಾಗಿದೆ. ಪ್ರತಿಪಕ್ಷದ ಉಪ ನಾಯಕ ಹುದ್ದೆ ಸ್ವೀಕರಿಸುವ ಮನಸ್ಥಿತಿಯಲ್ಲಿ ಪನ್ನೀರ್‌ಸೆಲ್ವಂ ಇಲ್ಲ, ಆದರೆ ಅವರ ಬೆಂಬಲಿಗರೊಬ್ಬರಿಗೆ ವಿಪ್ ಹುದ್ದೆ ನಿರೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿ ಮತ್ತಿತರ ಮುಂಜಾಗ್ರತಾ ಕ್ರಮಗಳೊಂದಿಗೆ ಜೂನ್ 14 ರಂದು ಪಕ್ಷದ ಶಾಸಕಾಂಗ ಸಭೆ ನಡೆಸುವುದಾಗಿ ಎಐಎಡಿಎಂಕೆ ನಗರದ ಪೊಲೀಸರಿಂದ ಅನುಮತಿಯನ್ನು ಕೋರಿದ್ದಾರೆ. ಅಂದು ಪಕ್ಷದ ಕಚೇರಿಗೆ ಆಗಮಿಸಲು ಎಲ್ಲಾ ಶಾಸಕರು ಗುರುತಿನ ಕಾರ್ಡ್ ತರಬೇಕು ಎಂದು ಎಐಎಡಿಎಂಕೆ ಕೇಂದ್ರ ಕಚೇರಿಯಿಂದ ಅಧಿಕೃತ ಹೇಳಿಕೆಯನ್ನು ನೀಡಲಾಗಿದೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp