ಕ್ರೆಡಿಟ್ ಕಾರ್ಡ್ ವಂಚನೆಗೆ ಬಿಜೆಪಿ ಸಂಸದ ಬಲಿಪಶು: ಸುಮಾರು 37 ಸಾವಿರ ರೂ. ಕಳೆದುಕೊಂಡ ರಾಮ್‌ವಿಚಾರ್!

ಬಿಜೆಪಿಯ ರಾಜ್ಯಸಭಾ ಸದಸ್ಯ ಮತ್ತು ಛತ್ತೀಸ್‌ಗಢ ಮಾಜಿ ಸಚಿವ ರಾಮ್‌ವಿಚಾರ್ ನೇತಮ್ ಕ್ರೆಡಿಟ್ ಕಾರ್ಡ್ ವಂಚನೆಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ರಾಮ್ ವಿಚಾರ್ ನೇತಮ್
ರಾಮ್ ವಿಚಾರ್ ನೇತಮ್

ರಾಯ್‌ಪುರ: ಬಿಜೆಪಿಯ ರಾಜ್ಯಸಭಾ ಸದಸ್ಯ ಮತ್ತು ಛತ್ತೀಸ್‌ಗಢ ಮಾಜಿ ಸಚಿವ ರಾಮ್‌ವಿಚಾರ್ ನೇತಮ್ ಕ್ರೆಡಿಟ್ ಕಾರ್ಡ್ ವಂಚನೆಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬರು ರಾಮ್‌ವಿಚಾರ್ ಅವರ ಕ್ರೆಡಿಟ್ ಕಾರ್ಡ್ ದುರುಪಯೋಗಪಡಿಸಿಕೊಂಡು ಸುಮಾರು 37,000 ರೂ.ಗಳ ವಹಿವಾಟು ನಡೆಸಿದ್ದಾರೆ ಎಂದು ಸಂಸದರ ಸಂಬಂಧಿ ರಾಯ್‌ಪುರದ ತೆಲಿಬಂಧ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಸದ ರಾಮ್‌ವಿಚಾರ್ ನೇತಮ್ ಅವರ ಹೆಸರಿನಲ್ಲಿ ನೀಡಲಾದ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅಪರಿಚಿತ ಕೋನ್ಮನ್ 508.92 ಡಾಲರ್, ಭಾರತೀಯ ಕರೆನ್ಸಿಯಲ್ಲಿ ಸುಮಾರು 36,844 ರೂ. ವಹಿವಾಟು ನಡೆಸಿದ್ದಾರೆ. ಈ ವರ್ಷದ ಫೆಬ್ರವರಿ 24 ರಂದು ಈ ವ್ಯವಹಾರವನ್ನು ನಡೆಸಲಾಗಿದೆ ಎಂದು ತೆಲಿಬಂಧ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ ) ಸೋನಾಲ್ ಗ್ವಾಲಾ ತಿಳಿಸಿದ್ದಾರೆ. 

ನೇತಮ್ ಅವರ ಹೆಸರಿನಲ್ಲಿದ್ದ ಕ್ರೆಡಿಟ್ ಕಾರ್ಡ್ ನ ಸಿಂಧುತ್ವವು 2020ರಲ್ಲಿ ಕೊನೆಗೊಂಡಿತ್ತು. ಅದರ ನವೀಕರಣಕ್ಕಾಗಿ ಯಾವುದೇ ವಿನಂತಿ ಮಾಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ನೇತಮ್ ಅವರ ಅನುಮತಿ ಮತ್ತು ಅರಿವಿಲ್ಲದಂತೆ ತಂತ್ರಜ್ಞಾನ ಬಳಿಸಿ ಅಪರಿಚಿತನು ಕ್ರೆಡಿಟ್ ಕಾರ್ಡ್ ಅನ್ನು ಮೋಸದಿಂದ ನವೀಕರಿಸಿ ಬಳಸಿದ್ದಾನೆ. ಆತ 508.92 ಅಮೆರಿಕಾ ಡಾಲರ್ ವಹಿವಾಟು ನಡೆಸಿದ್ದು 45.668 ರೂ.(ಇದರಲ್ಲಿ ತೆರಿಗೆ ಮತ್ತು ವಹಿವಾಟಿನ ವಿರುದ್ಧದ ಬಡ್ಡಿಯೂ ಸೇರಿದೆ) ಪಾವತಿಸುವಂತೆ ಬ್ಯಾಂಕಿನ ಕಾರ್ಯನಿರ್ವಾಹಕ ನೇತಮ್‌ಗೆ ಕರೆ ನೀಡಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ ಎಂದರು. 

ಆರಂಭದಲ್ಲಿ, ನೇತಮ್ ಅವರು ತಾವು ಅಂತಹ ಯಾವುದೇ ವಹಿವಾಟು ನಡೆಸಿಲ್ಲ. ಅಲ್ಲದೆ ಅದರ ಮಾನ್ಯತೆ ಕೊನೆಗೊಂಡಿರುವುದರಿಂದ ಕ್ರೆಡಿಟ್ ಕಾರ್ಡ್ ಸಹ ನನ್ನ ಬಳಿ ಇಲ್ಲ ಎಂದು ಬ್ಯಾಂಕ್‌ಗೆ ತಿಳಿಸಿದರು. ಆದರೆ ಹಣ ಪಾವತಿಗಾಗಿ ಬ್ಯಾಂಕಿನಿಂದ ನಿರಂತರವಾಗಿ ಕರೆಗಳು ಬರುತ್ತಿದ್ದಂತೆ ನೇತಮ್ ಬ್ಯಾಂಕಿಗೆ ಭೇಟಿ ನೀಡಿ ಅಲ್ಲಿ ಅವರು ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದಾರೆ. ತದ ನಂತರ ದೂರು ದಾಖಲಿಸಿದ್ದಾರೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420(ಮೋಸ) ಅಡಿಯಲ್ಲಿ ಅಪರಾಧ ದಾಖಲಿಸಲಾಗಿದೆ ಎಂದು ಗ್ವಾಲಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com