ಮುಂಬರುವ ಪಂಜಾಬ್ ಚುನಾವಣೆಗೆ ಮುನ್ನ ಕ್ಯಾ.ಅಮರಿಂದರ್ ಸಿಂಗ್ ಮತ್ತು ಪ್ರಧಾನಿ ಮೋದಿ ನಡುವೆ ಗಾಢ ಬಾಂಧವ್ಯ ಬೆಳೆದಿದೆ: ಮನೀಶ್ ಸಿಸೋಡಿಯಾ

ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವೆ ಪಂಜಾಬ್ ಚುನಾವಣೆಗೆ ಮುನ್ನ ಒಂದು ರೀತಿಯ ಗಟ್ಟಿ ಬಾಂಧವ್ಯ ಬೆಳೆದಿದೆ ಎಂದು ಆಪ್ ನಾಯಕ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವೆ ಪಂಜಾಬ್ ಚುನಾವಣೆಗೆ ಮುನ್ನ ಒಂದು ರೀತಿಯ ಗಟ್ಟಿ ಬಾಂಧವ್ಯ ಬೆಳೆದಿದೆ ಎಂದು ಆಪ್ ನಾಯಕ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಶಾಲಾ ಶಿಕ್ಷಣ ವಿಷಯದಲ್ಲಿ 2019-20ನೇ ಸಾಲಿನ ಕಾರ್ಯಕ್ಷಮತೆ ಶ್ರೇಣಿ ಸೂಚ್ಯಂಕದಲ್ಲಿ ಪಂಜಾಬ್ ರಾಜ್ಯಕ್ಕೆ ನಂಬರ್ 1 ಸ್ಥಾನ ಬಂದಿರುವ ಹಿನ್ನೆಲೆಯಲ್ಲಿ ಸಿಸೋಡಿಯಾ ಈ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಮೋದಿ ನೇತೃತ್ವದ ಬಿಜೆಪಿ  ಪಕ್ಷವಿದೆ. 

 ಸೂಚ್ಯಂಕವನ್ನು ನೋಡಿದರೆ ಪಂಜಾಬ್ ನಲ್ಲಿ ಸರ್ಕಾರಿ ಶಾಲೆಗಳು ಉತ್ತಮವಾಗಿವೆ, ದೆಹಲಿಯಲ್ಲಿ ಉತ್ತಮವಾಗಿಲ್ಲ ಎಂದು ತೋರಿಸುತ್ತದೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮೇಲೆ ದಯೆತೋರಿಸಿ ಪ್ರಧಾನಿ ಮೋದಿಯವರು ನೀಡಿದ ಸೂಚ್ಯಂಕದಂತೆ ಕಂಡುಬರುತ್ತಿದೆ. ಹಿಂದಿನ ಚುನಾವಣೆಯಂತೆ ಈ ಬಾರಿ ಕೂಡ ಇಬ್ಬರ ನಡುವೆ ಗಾಢ ಬಾಂಧವ್ಯ ಬೆಳೆದಂತೆ ಕಂಡುಬರುತ್ತಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಪಂಜಾಬ್ ಸರ್ಕಾರದ ಅಸಮರ್ಪಕ ಸಾಧನೆಯ ಬಗ್ಗೆ ಪ್ರಶ್ನೆ, ಸಂದೇಹಗಳು ಮೂಡುತ್ತಿರುವ ಸಂದರ್ಭದಲ್ಲಿ ಈ ವರದಿ ನೀಡಿರುವುದು ಎಲ್ಲವನ್ನೂ ತಿಳಿಸುತ್ತದೆ, ಮುಂಬರುವ ಪಂಜಾಬ್ ಚುನಾವಣೆಯ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿಯವರ ಮಧ್ಯೆ ಏರ್ಪಟ್ಟಿರುವ ಬಾಂಧವ್ಯದ ಸಂಕೇತವಿದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com