ರಾಮಜನ್ಮಭೂಮಿ ಟ್ರಸ್ಟ್ ನಿಂದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ: ಆಪ್ ಮತ್ತು ಸಮಾಜವಾದಿ ಪಕ್ಷ ಆರೋಪ

ಕಳೆದ ಮಾರ್ಚ್ ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ನಿರ್ಮಾಣಕ್ಕೆ ಖರೀದಿಸಿರುವ ಜಮೀನಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು ಮತ್ತು ಪದಾಧಿಕಾರಿಗಳು ಸೇರಿಕೊಂಡು ಈ ಭ್ರಷ್ಟಾಚಾರವೆಸಗಿದ್ದಾರೆ ಎಂದು ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಅಯೋಧ್ಯೆಯ ಉದ್ದೇಶಿತ ರಾಮಮಂದಿರದ ನಕ್ಷೆ
ಅಯೋಧ್ಯೆಯ ಉದ್ದೇಶಿತ ರಾಮಮಂದಿರದ ನಕ್ಷೆ

ಲಕ್ನೊ: ಕಳೆದ ಮಾರ್ಚ್ ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ನಿರ್ಮಾಣಕ್ಕೆ ಖರೀದಿಸಿರುವ ಜಮೀನಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು ಮತ್ತು ಪದಾಧಿಕಾರಿಗಳು ಸೇರಿಕೊಂಡು ಈ ಭ್ರಷ್ಟಾಚಾರವೆಸಗಿದ್ದಾರೆ ಎಂದು ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ನಿನ್ನೆ ಈ ಕುರಿತು ಲಕ್ನೊದಲ್ಲಿ ಆಪ್ ಶಾಸಕ ಸಂಜಯ್ ಸಿಂಗ್ ಮತ್ತು ಅಯೋಧ್ಯೆಯಲ್ಲಿ ಸಮಾಜವಾದಿ ನಾಯಕ ಪವನ್ ಪಾಂಡೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಈ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆಗೆ ಆದೇಶ ನೀಡಬೇಕು, ಟ್ರಸ್ಟ್ ನ್ನು ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನ ಮೇಲೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಲಕ್ನೊದಲ್ಲಿ ಈ ಬಗ್ಗೆ ವಿಸ್ತೃತವಾಗಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಆಪ್ ನಾಯಕ ಸಂಜಯ್ ಸಿಂಗ್, ಅಯೋಧ್ಯೆಯಲ್ಲಿ ಸುಮಾರು 5.80 ಕೋಟಿ ರೂಪಾಯಿ ಬೆಲೆಯ ಭೂಮಿಯನ್ನು ಕುಸುಮ್ ಪಾಠಕ್ ಮತ್ತು ಹರೀಶ್ ಪಾಠಕ್ ಎಂಬುವವರು ಸುಲ್ತಾನ್ ತಿವಾರಿ ಮತ್ತು ರವಿ ಮೋಹನ್ ತಿವಾರಿ ಎಂಬುವವರಿಗೆ 2 ಕೋಟಿ ಬೆಲೆಗೆ ಕಳೆದ ಮಾರ್ಚ್ 18ರಂದು ಸಾಯಂಕಾಲ ಮಾರಾಟ ಮಾಡಿದ್ದಾರೆ.

ಸಾಯಂಕಾಲ 7 ಗಂಟೆ 10 ನಿಮಿಷಕ್ಕೆ ಮಾರಾಟವಾದ ಭೂಮಿ ಕೇವಲ 5 ನಿಮಿಷ ಕಳೆದ ನಂತರ ಜಮೀನು ಕೊಂಡುಕೊಂಡ ಅನ್ಸಾರಿ ಮತ್ತು ತಿವಾರಿಯವರು ಅದೇ ಭೂಮಿಯನ್ನು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ 18.50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮಾರಾಟದ ಮೊತ್ತದಲ್ಲಿ 17 ಕೋಟಿ ರೂಪಾಯಿಗಳನ್ನು ಆರ್ ಟಿಜಿಎಸ್ ಮೂಲಕ ಪಾವತಿ ಮಾಡಿದ್ದಾರೆ. ಭಾರತದಲ್ಲಿ ಬಿಡಿ, ಜಗತ್ತಿನ ಯಾವ ಮೂಲೆಯಲ್ಲಿಯಾದರೂ ಒಂದು ತುಂಡು ಭೂಮಿಗೆ ಇಷ್ಟೊಂದು ಬೆಲೆ ಬಂದಿರುವುದು ಎಲ್ಲಾದರೂ ಕೇಳಿದ್ದೀರಾ, ನೋಡಿದ್ದೀರಾ ಎಂದು ಸಿಂಗ್ ಪ್ರಶ್ನಿಸಿದ್ದಾರೆ.

ಎರಡೂ ಭೂಮಿ ಖರೀದಿಯ ದಾಖಲಾತಿಗೆ ಸಾಕ್ಷಿಯಾಗಿ ಒಬ್ಬರೇ ಇರುವುದು, ಅದು ಅಯೋಧ್ಯೆಯ ಮೇಯರ್ ರಿಶಿಕೇಶ್ ಉಪಾಧ್ಯ ಮತ್ತು ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ.

ತಮ್ಮ ಮತ್ತು ದೇವಸ್ಥಾನದ ಟ್ರಸ್ಟ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಯೋಧ್ಯೆಯಲ್ಲಿ ನಿನ್ನೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿ,ರಾಮ ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಟ್ರಸ್ಟ್ ಸಭೆಯಲ್ಲಿ ಏನಾಯಿತು ಎಂದು ನಾನು ಮಾತನಾಡುತ್ತೇನೆ. ಆರೋಪಗಳು ಮಾಡುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪಗಳನ್ನು ಒಳಗೊಂಡಂತೆ 100 ವರ್ಷಗಳಿಂದ ನಮ್ಮ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ.ನೀವು, ಪತ್ರಕರ್ತರು ಇಂದು ದೇವಾಲಯ ನಿರ್ಮಾಣ ಸಂಬಂಧಿತ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ನಾನು ಅದರ ಬಗ್ಗೆ ವಿವರ ನೀಡುತ್ತೇನೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com